ಕರ್ನಾಟಕ

karnataka

ETV Bharat / sitara

'ರಾಮಾಯಾಣ' ಯಶಸ್ಸಿನ ಹಿಂದಿನ ಗುಟ್ಟೇನು ಗೊತ್ತಾ...?  ಸೀತೆ ಹೇಳಿದ ಮಾತಿದು!

ರಾಮಾಯಣ ಧಾರಾವಾಹಿಯು ವೀಕ್ಷಕರ ದೃಷ್ಟಿಯಿಂದ ಜನಪ್ರಿಯ ಗೇಮ್ ಆಫ್ ಥ್ರೋನ್ಸ್​ ಸಿರೀಸ್​ ಹಿಂದಿಕ್ಕಿದೆ ಎಂದು ಹೇಳಲಾಗಿದೆ. 30 ವರ್ಷಗಳ ಹಿಂದಿನ ಮ್ಯಾಜಿಕ್ ಮರು-ಓಟವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದೆ.

Ramayan
ರಾಮಾಯಾಣ

By

Published : May 2, 2020, 2:00 PM IST

ನವದೆಹಲಿ:ಸುಮಾರು ಮೂರು ದಶಕಗಳ ನಂತರ ಮರು ಪ್ರಸಾರವಾದ ರಾಮಾನಂದ್ ಸಾಗರ್ ಅವರ ಮಹಾಕಾವ್ಯ ರಾಮಾಯಣವು ವಿಶ್ವದಲ್ಲೇ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

'ಧಾರಾವಾಹಿಗೆ ಮತ್ತೊಮ್ಮೆ ದೊರೆತ ಪ್ರೀತಿಯಿಂದ ಸಂತೋಷವಾಗಿದೆ. 30 ವರ್ಷಗಳ ಹಿಂದಿನ ಮ್ಯಾಜಿಕ್ ಮರು - ಓಟವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದೆ' ಎಂದು ಸೀತಾ ಪಾತ್ರದಲ್ಲಿ ಜನಪ್ರಿಯತೆ ಗಳಿಸಿದ ನಟಿ ದೀಪಿಕಾ ಚಿಖಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಅಧಿಕೃತ ಟ್ವಿಟ್ಟರ್​ನಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ,

ಇನ್ನು ಮಾಧ್ಯಮ ವರದಿಗಳ ಪ್ರಕಾರ, ರಾಮಾಯಣ ಧಾರಾವಾಹಿಯು ವೀಕ್ಷಕರ ದೃಷ್ಟಿಯಿಂದ ಜನಪ್ರಿಯ ಗೇಮ್ ಆಫ್ ಥ್ರೋನ್ಸ್​ ಸಿರೀಸ್​ ಹಿಂದಿಕ್ಕಿದೆ ಎಂದು ಹೇಳಲಾಗಿದೆ. 'ರಾಮಾಯಣವು ಗೇಮ್ ಆಫ್ ಥ್ರೋನ್ಸ್​ ಹಿಂದಿಕ್ಕಿದೆ ಎಂದು ತಿಳಿದು ನಿಜಕ್ಕೂ ಖುಷಿಪಟ್ಟಿದ್ದೇನೆ. ಇದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಇದು ಒಂದು ದೊಡ್ಡ ಸುದ್ದಿ' ಎಂದು ದೀಪಿಕಾ ಐಎಎನ್‌ಎಸ್‌ಗೆ ತಿಳಿಸಿದರು.

ನಾನು ಕಾರ್ಯಕ್ರಮವನ್ನು ವಿಶ್ಲೇಷಿಸಿಲ್ಲ, ಕುಳಿತು ವಿಶ್ಲೇಷಿಸುವ ವ್ಯಕ್ತಿಯೂ ನಾನಲ್ಲ. ನಾನು ಯೋಚಿಸಬಹುದಾದ ಏಕೈಕ ವಿಷಯವೆಂದರೆ, ಇದು ಉತ್ತಮ ಕಥೆ ಮತ್ತು ಹಿನ್ನೆಲೆಯನ್ನು ಹೊಂದಿತ್ತು. ಅದೊಂದು ಪರಂಪರೆಯಾಗಿ ಮಾರ್ಪಟ್ಟಿತ್ತು. ಯಾವಾಗ ಜನ ನಾವೂ ಸಹ ಆ ಪರಂಪರೆಯ ಭಾಗವಾಗಿದ್ದೇವೆ ಎಂಬ ಸಂದೇಶಗಳನ್ನು ಪಡೆದರೋ ಆಗ ರಾಮಾಯಣದತ್ತ ಆಕರ್ಷಿತರಾದರು, ನೋಡಲಾರಂಭಿಸಿದರು, ಎಂದಿದ್ದಾರೆ.

ಕಾರ್ಯಕ್ರಮದ ಯಶಸ್ಸಿಗೆ ಧಾರಾವಾಹಿಯ ಇತರ ಶ್ರಮಿಕ ವರ್ಗದವರ ಪಾತ್ರವೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. 30 ವರ್ಷಗಳ ಬಳಿಕವೂ ಜನರು ರಾಮಾಯಣ ನೋಡಲು ಬಯಸುತ್ತಾರೆ ಎಂದರೆ ಅದು ನಿಜಕ್ಕೂ ಅದರಲ್ಲಿನ ನಂಬಿಕೆ ಮತ್ತು ಯಾವುದೋ ಮಾಯೆ ಎನ್ನಬಹುದು.​ ಇದು ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ ದೀಪಿಕಾ.

ಇನ್ನು ಈ ಕಾರ್ಯಕ್ರಮವನ್ನ ಏಪ್ರಿಲ್​ 16 ರಂದು 7.7 ಕೋಟಿ ಜ ನ ವೀಕ್ಷಣೆ ಮಾಡಿದ್ದಾರೆ ಎಂದರೆ ರಾಮಾಯಣದ ಜನಪ್ರೀಯತೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ.

ABOUT THE AUTHOR

...view details