ಈ ಹಿಂದೆ ಅರವಿಂದ್ ವಾಲ್ ಫೋಟೋ, ಈಗ ವೈಷ್ಣವಿ ಅವರ ವಾಲ್ ಫೋಟೋ. ಹೌದು, ಬಿಗ್‍ಬಾಸ್ ಮನೆಯ ಗಾರ್ಡನ್ ಏರಿಯಾ ಸಂಜೆಯಾಗುತ್ತಿದ್ದಂತೆ ದೀಪಾಲಂಕಾರಗಳಿಂದ ಕೂಡಿದ ಫೋಟೋ ವಿಜೃಂಭಿಸುತ್ತಿದೆ. ಬೆಸ್ಟ್ ಡ್ರೆಸ್ನಲ್ಲಿ ಗೆದ್ದಿದ್ದ ವೈಷ್ಣವಿ ಅವರ ವಾಲ್ ಹಾಗೂ ಬಿಗ್‍ಬಾಸ್ ಜರ್ನಿಯ ಕ್ಯೂಟ್ ಫೋಟೋಗಳು ಎಲ್ಲರ ಗಮನ ಸೆಳೆದವು.
ಇದೇ ವೇಳೆ ವೈಷ್ಣವಿ ಅವರ ಬಗ್ಗೆ ಮನೆಯವರಿಗೆ ಇರುವ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶವನ್ನು ಬಿಗ್ ಬಾಸ್ ನೀಡಿದರು. ಎಲ್ಲರ ಅಭಿಪ್ರಾಯ ಹೀಗಿತ್ತು..
ಅರವಿಂದ್ : ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೂ ಹೇಗೆ ಇದ್ದರೋ, ಈವರೆಗೂ ಹಾಗೇ ಇದ್ದಾರೆ. ಒಳ್ಳೆಯ ಸ್ನೇಹಿತನನ್ನು ನಾನು ನಿಮ್ಮಲ್ಲಿ ಎದುರು ನೋಡುತ್ತೇನೆ. ಒಳ್ಳೆಯ ಮನಸ್ಸಿನವರು. ಹೀಗೆ ಇರಿ.
ದಿವ್ಯಾ ಉರುಡುಗ:ವೈಷ್ಣವಿ ನನಗೆ ಬಿಗ್‍ಬಾಸ್ ಮನೆಗಿಂತ ಬರುವ ಮೊದಲೆ ಗೊತ್ತು. ನಿಮ್ಮ ಮನಸ್ಸು ಒಳ್ಳೆಯದು. ನಿಮ್ಮ ನಗು, ಅಡುಗೆ, ಜೋಕ್ಸ್ ಎಲ್ಲ ನನಗೆ ಇಷ್ಟ. ನನಗೆ ಹುಷಾರಿಲ್ಲದಿದ್ದಾಗ ನನ್ನನ್ನು ಕೇರ್ ಮಾಡಿದ್ದೀರಾ. ತುಂಬಾ ಧನ್ಯವಾದಗಳು.
ಪ್ರಶಾಂತ್ ಸಂಬರಗಿ:ಈ ಮನೆಯಲ್ಲಿ ಮನಸ್ಸು ಬಿಚ್ಚಿ ಮಾತನಾಡಲು ಇರುವ ಏಕೈಕ ವ್ಯಕ್ತಿ ಅಂದ್ರೆ ವೈಷ್ಣವಿ. ಯಾರನ್ನಾದ್ರೂ ನಂಬಬೇಕು, ಹೃದಯದಿಂದ ಮಾತನಾಡಬೇಕು ಎಂದರೆ ಅದು ವೈಷ್ಣವಿ. ಮೊದಲು ಟಾಸ್ಕ್ ಆಡದ ವೈಷ್ಣವಿ ನಂತರ ಚೆನ್ನಾಗಿ ಆಡುತ್ತಿದ್ದಾರೆ. ತಾಯಿ ಗುಣ ಹೊಂದಿರುವ ವೈಷ್ಣವಿಗೆ ಒಳ್ಳೆಯದಾಗಲಿ.