ವೀಕೆಂಡ್ ವಿಥ್ ರಮೇಶ್ ಸೀಸನ್ 4ರ ಮೊದಲ ಅತಿಥಿಯಾಗಿ ವೀರೇಂದ್ರ ಹೆಗ್ಗಡೆಯವರು ಬರುತ್ತಿದ್ದಾರೆ. ಇದೇ ಶನಿವಾರ ಪ್ರಸಾರವಾಗಲಿರುವ ಮೊದಲ ಎಫಿಸೋಡಿನ ಸಾಧಕರ ಸೀಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಕಾಣಿಸಿಕೊಳ್ಳಲಿದ್ದಾರೆ.
ವೀಕೆಂಡ್ ವಿಥ್ ರಮೇಶ್ ಸೀಸನ್ 4 ಗೆ ಮುಹೂರ್ತ ಫಿಕ್ಸ್... ಮೊದಲ ಸಾಧಕರು ವೀರೇಂದ್ರ ಹೆಗ್ಗಡೆ - undefined
ವೀಕೆಂಡ್ ವಿಥ್ ರಮೇಶ್ ಸೀಸನ್ 4 ಇದೇ 20 ರಂದು ಪ್ರಾರಂಭವಾಗುತ್ತಿದೆ. ಕಾರ್ಯಕ್ರಮದ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಗಮಿಸಲಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ಝೀ ವಾಹಿನಿ ತಮ್ಮ ಫೇಸ್ಬುಕ್ನಲ್ಲಿ ಮೊದಲ ಅತಿಥಿಯ ಪ್ರೋಮೋ ಬಿಡುಗಡೆ ಮಾಡಿದೆ. ವಿರೇಂದ್ರ ಹೆಗ್ಗಡೆಯವರ ಕುಟುಂಬ, ಅವರ ಮೊದಲ ಕಾರು, ಮಕ್ಕಳು, ಗೆಳೆಯರು, ಹಿತೈಷಿಗಳು ಹಾಗೂ ಅವರ ಶಾಲಾ ದಿನಗಳಲ್ಲಿ ದಾಖಲಾಗಿದ್ದ ಅಂಕಪಟ್ಟಿ, ರೆಕಾರ್ಡ್ಸ್, ಹೀಗೆ ಹಲವು ಸನ್ನಿವೇಶಗಳು ಪ್ರೋಮೋದಲ್ಲಿ ರಿವೀಲ್ ಆಗಿವೆ. ಶೋನಲ್ಲಿ ಅವರ ತಂದೆಯವರ ಮಾತುಗಳನ್ನು ನೆನೆದು ಹೆಗ್ಗಡೆಯವರು ಕಣ್ಣೀರು ಹಾಕುವಂತಹ ಭಾವುಕ ಕ್ಷಣ ಕೂಡ ಇದರಲ್ಲಿದೆ. ಇದೇ ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ಪ್ರಸಾರವಾಗಲಿದೆ.