ಕರ್ನಾಟಕ

karnataka

ETV Bharat / sitara

ಶೀಘ್ರದಲ್ಲೇ ಮುಗಿಯಲಿದೆ 'ವೀಕೆಂಡ್ ವಿತ್ ರಮೇಶ್​​': ಸೀಸನ್​ ಕೊನೆಯ ಅತಿಥಿ ಯಾರು..? - undefined

ಇತ್ತೀಚೆಗಷ್ಟೇ ಆರಂಭವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಶೀಘ್ರದಲ್ಲೇ ಮುಗಿಯಲಿದೆ. ಈ ಕುರಿತು ನಿರೂಪಕ ರಮೇಶ್ ಅರವಿಂದ್ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಹೇಳಿಕೊಂಡಿದ್ದಾರೆ.

ರಮೇಶ್ ಅರವಿಂದ್

By

Published : Jul 3, 2019, 10:28 AM IST

ಖಾಸಗಿ ವಾಹಿನಿಯ, ನಟ ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿರುವ 'ವೀಕೆಂಡ್ ವಿತ್ ರಮೇಶ್​​' ಪ್ರೇಕ್ಷಕರ ಮೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದು. 2-3 ತಿಂಗಳ ಹಿಂದಷ್ಟೇ ಈ ಕಾರ್ಯಕ್ರಮದ 4ನೇ ಸೀಸನ್ ಆರಂಭವಾಗಿತ್ತು. ಆದರೆ ಈಗ ಈ ಸೀಸನ್ ಕೂಡಾ ಮುಗಿಯುತ್ತಾ ಬಂದಿದೆ.

'ವೀಕೆಂಡ್ ವಿತ್ ರಮೇಶ್​​' ಕಾರ್ಯಕ್ರಮದಲ್ಲಿ ನಟಿ, ಸಂಸದೆ ಸುಮಲತಾ ಅಂಬರೀಶ್ (ಫೋಟೋ ಕೃಪೆ: ಜೀ ಕನ್ನಡ)

ಸ್ವತ: ರಮೇಶ್ ಅರವಿಂದ್ ಅವರೇ ಈ ವಿಷಯ ತಿಳಿಸಿದ್ದಾರೆ. ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ರಮೇಶ್ 'ಈಗ ತಾನೇ ಸೀಸನ್ 4 ಶುರುವಾಗಿದೆ, ಧರ್ಮಸ್ಥಳದ ಧರ್ಮಾಧಿಕಾರಿಗಳು ಈ ಸೀಟ್​ನಲ್ಲಿ ಕೂತಿದ್ದರು. ಆಗಲೇ ಈ ಸೀಸನ್ ಮುಗಿಯುತ್ತಾ ಬಂತು, ಕೊನೆಯ 1-2 ವಾರಗಳಲ್ಲಿ ಇದ್ದೇವೆ. ನೀವು ನಮ್ಮ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ದೀರೆಂದು ಭಾವಿಸುತ್ತೇನೆ' ಎಂದು ರಮೇಶ್ ಹೇಳಿಕೊಂಡಿದ್ದಾರೆ.

ಈ ಸೀಸನ್ ಇಷ್ಟು ಬೇಗ ಮುಗಿಯುತ್ತಿರುವುದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿರುವುದಂತೂ ನಿಜ. ಈ ಕಾರ್ಯಕ್ರಮ ಆರಂಭವಾಗುವ ಮುನ್ನವೇ ಸಾಧಕರ ಬಗ್ಗೆ ಪ್ರೇಕ್ಷಕರಿಂದ ಆಗ್ರಹ, ಅಪಸ್ವರ ಇತ್ತು. ಆದರೂ, ಸಿನಿಮಾ ಕ್ಷೇತ್ರದವರನ್ನೂ ಸೇರಿದಂತೆ ಇನ್ಫೋಸಿಸ್ ಅಧ್ಯಕ್ಷರು, ಐಪಿಎಸ್ ಅಧಿಕಾರಿಗಳು, ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಈಗಾಗಲೇ 17 ಸಾಧಕರು ಈ ಬಾರಿ ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಘಟನೆಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು ಮೂವರು ಅತಿಥಿಗಳಷ್ಟೇ ಬರಬೇಕಿದೆ. ಕೊನೆಯ ಸಂಚಿಕೆಯ ಅತಿಥಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಐಪಿಎಸ್ ಅಧಿಕಾರಿ ಶಂಕರ್ ಬಿದರಿ (ಫೋಟೋ ಕೃಪೆ: ಜೀ ಕನ್ನಡ)

For All Latest Updates

TAGGED:

ABOUT THE AUTHOR

...view details