ಕರ್ನಾಟಕ

karnataka

ETV Bharat / sitara

ನೋಟಾ ಒತ್ತುವ ಮುನ್ನ ಒಮ್ಮೆ ಯೋಚಿಸಿ...ಮತದಾನ ಜಾಗೃತಿ ಮೂಡಿಸಿದ ನಟಿ ತಾರಾ - ನೋಟಾ

ಲೋಕಸಭಾ ಚುನಾವಣೆಯಲ್ಲಿ ನೋಟಾಗೆ ಮತ ಹಾಕುವ ಮುನ್ನ ಆಲೋಚಿಸಿ, ಸರಿಯಾದ ಅಭ್ಯರ್ಥಿಗೆ ವೋಟ್ ಮಾಡಿ ಎಂದು ನಟಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಮನವಿ ಮಾಡಿದ್ದಾರೆ.

ನಟಿ ತಾರಾ ಅವರಿಂದ ಮತದಾನದ ಜಾಗೃತಿ

By

Published : Mar 22, 2019, 4:53 PM IST

Updated : Mar 22, 2019, 7:48 PM IST

ಇಂದು ಸೆಲ್ಪಿ ವಿಡಿಯೋ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಿರುವ ಅವರು, ಭಗವಂತ ನಮ್ಮ ಹಣೆಬರಹ ಬರೆಯುತ್ತಾನೆ. ಅದರಂತೆ ನಮಗೆ ದೇಶದ ಭವಿಷ್ಯ ಬರೆಯುವ ಅವಕಾಶವಾಗಿ ಚುನಾವಣೆ ಸಿಕ್ಕಿದೆ. ನಮ್ಮೆಲ್ಲರ ಭವಿಷ್ಯ ಬರೆಯಲು ಈ ಚುನಾವಣೆ ಉತ್ತಮ ಅವಕಾಶ. ಈ ಚುನಾವಣೆ ಯಾರೂ ಮಿಸ್ ಮಾಡಿಕೊಳ್ಳಬೇಡಿ. ನಾವು ನಮ್ಮ ಮಕ್ಕಳ, ಸರ್ಕಾರ ಹಾಗೂ ನಮ್ಮ ಮುಂದಿನ ಭವಿಷ್ಯದ ಹಣೆಬರಹ ನಾವೇ ಬರೆಯೋಣ. ಮತದಾನದಂದು ರಜೆಯಿದ್ದರೂ ಮತಹಾಕುವುದನ್ನು ಮರೆಯಬೇಡಿ ಎಂದಿದ್ದಾರೆ.

ನಟಿ ತಾರಾ ಅವರಿಂದ ಮತದಾನದ ಜಾಗೃತಿ

ಇದೇ ವೇಳೆ ನೋಟಾ ಚಲಾವಣೆ ಬಗ್ಗೆಯೂ ಮಾತನಾಡಿರುವ ಅವರು, ನೋಟಾ ಬಟನ್ ಒತ್ತುವ ಮುನ್ನ ಒಮ್ಮೆ ಯೋಚಿಸಿ. ಇರೋದರಲ್ಲಿಯೇ ಒಳ್ಳೆಯ ಅಭ್ಯರ್ಥಿಗೆ ವೋಟ್ ಹಾಕಿ ಎಂದು ಜಾಗೃತಿ ಮೂಡಿಸಿದ್ದಾರೆ.

Last Updated : Mar 22, 2019, 7:48 PM IST

ABOUT THE AUTHOR

...view details