ಹೈದರಾಬಾದ್:ತಮಿಳು ನಟ ವಿಶಾಲ್ ಅಭಿನಯದ 'ಸಾಮಾನ್ಯುಡು' ಸಿನಿಮಾ ಸಂಕ್ರಾಂತಿ ಹಬ್ಬದಂದು (ಜನವರಿ 14) ಬಿಡುಗಡೆಯಾಗಲಿದೆ. ನಿನ್ನೆ (ಮಂಗಳವಾರ) ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.
ಚಿತ್ರದ ಕಥೆಯು ವ್ಯವಸ್ಥೆ ವಿರುದ್ಧ ನಿಲ್ಲುವ ಮತ್ತು ತಪ್ಪುಗಳ ವಿರುದ್ಧ ಹೋರಾಡಲು ಜನರನ್ನು ಪ್ರೇರೇಪಿಸುವ ಸಾಮಾನ್ಯ ಮನುಷ್ಯನ ಸುತ್ತ ಸುತ್ತುತ್ತದೆ. 'ಸಾಮಾನ್ಯುಡು' ಚಿತ್ರದಲ್ಲಿ ವಿಶಾಲ್‌ಗೆ ನಾಯಕಿಯಾಗಿ ನಟಿ ಡಿಂಪಲ್ ಹಯಾತಿ ನಟಿಸಿದ್ದಾರೆ. ನಟರಾದ ಯೋಗಿ ಬಾಬು, ಬಾಬುರಾಜ್ ಜೇಕಬ್, ಪಿ.ಎ. ತುಳಸಿ, ರವೀನಾ ರವಿ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸಿನಿಮಾ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದ್ದು, ಆ್ಯಕ್ಷನ್ ಡ್ರಾಮಾ ಎಂದೇ ಬಿಂಬಿಸಲಾಗಿದೆ. ಚೊಚ್ಚಲ ಚಿತ್ರನಿರ್ಮಾಪಕ ಥೂ ಪಾ ಸರವಣನ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ವಿಶಾಲ್ ಫಿಲ್ಮ್ ಫ್ಯಾಕ್ಟರಿ (VFL) ಬ್ಯಾನರ್‌ನಲ್ಲಿ ವಿಶಾಲ್ ಅವರೇ ನಿರ್ಮಿಸುತ್ತಿದ್ದಾರೆ. ಕವಿನ್ ರಾಜ ಛಾಯಾಗ್ರಹಣ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ. ಎಸ್.ಎಸ್.ಮೂರ್ತಿ ಕಲಾ ನಿರ್ದೇಶಕರಾಗಿದ್ದು, ಎನ್.ಬಿ. ಶ್ರೀಕಾಂತ್ ಸಂಕಲನಕಾರರಾಗಿದ್ದಾರೆ.
ನಟ ವಿಶಾಲ್ 'ಎನಿಮಿ' ಶೀರ್ಷಿಕೆಯ ಚಿತ್ರದಲ್ಲಿ ನಟಿಸಲಿದ್ದಾರೆ. ಶೀಘ್ರದಲ್ಲೇ ಅವರು ಕಾರ್ತಿಕ್ ತಂಗವೇಲು ಅವರ ಕಿಕ್‌ಸ್ಟಾರ್ಟ್ ಚಿತ್ರದಲ್ಲಿ ನಟಿಸಲಿದ್ದಾರೆ. ಅಲ್ಲದೇ ಅವರ ಮುಂದಿನ ಚಿತ್ರ 'ತುಪ್ಪರಿವಾಲನ್ 2' ಕೂಡ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಇದನ್ನೂ ಓದಿ:ಹೊಸ ವೆಬ್ ಸೀರೀಸ್ ಮೂಲಕ ಮತ್ತೆ ನಗಿಸಲು ಬರ್ತಿದ್ದಾರೆ 'ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್'