6 ತಿಂಗಳ ಕಾಲ ಮನೆಯಲ್ಲೇ ಕುಳಿತಿದ್ದ ಜನರು ಈಗ ಪ್ರವಾಸ ಹೋಗುತ್ತಿದ್ದಾರೆ. ಟಾಲಿವುಡ್ ನಿರ್ದೇಶಕ ರಾಜಮೌಳಿ ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಕೂಡಾ ಇದೀಗ ಪತಿ ಜೈಜಗದೀಶ್ ಹಾಗೂ ಮಕ್ಕಳೊಂದಿಗೆ ಮಡಿಕೇರಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಮಂಜಿನ ನಗರಿಯಲ್ಲಿ ಎಂಜಾಯ್ ಮಾಡುತ್ತಿರುವ ವಿಜಯಲಕ್ಷ್ಮಿ ಸಿಂಗ್ ಕುಟುಂಬ - Sandalwood director Vijayalakshmi singh
ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪತಿ ಜೈಜಗದೀಶ್ ಹಾಗೂ ಮೂವರು ಮಕ್ಕಳೊಂದಿಗೆ ಮಡಿಕೇರಿಗೆ ತೆರಳಿದ್ದಾರೆ. ಇಲ್ಲಿನ ಸುಂದರ ಪರಿಸರದಲ್ಲಿ ತೆಗೆದ ಫೋಟೋಗಳನ್ನು ವೈಸಿರಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
![ಮಂಜಿನ ನಗರಿಯಲ್ಲಿ ಎಂಜಾಯ್ ಮಾಡುತ್ತಿರುವ ವಿಜಯಲಕ್ಷ್ಮಿ ಸಿಂಗ್ ಕುಟುಂಬ Vijayalakshmi singh family in Madikeri](https://etvbharatimages.akamaized.net/etvbharat/prod-images/768-512-8817378-320-8817378-1600250850114.jpg)
ಬೆಳ್ಳಿತೆರೆಯಲ್ಲಿ ನಿರ್ದೇಶನ, ನಟನೆಯಲ್ಲಿ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಸಿಂಗ್ ಮೊದಲ ಬಾರಿಗೆ ಕಿರುತೆರೆಯ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಅಮ್ಮ ಶಾರದಾದೇವಿ ಆಗಿ ಅಭಿನಯಿಸುತ್ತಿದ್ದಾರೆ. ಕಿರುತೆರೆಪ್ರಿಯರು ಕೂಡಾ ಶಾರದಾದೇವಿ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಶೂಟಿಂಗ್ ನಡುವೆ ಬಿಡುವು ಪಡೆದುಕೊಂಡು ಮಡಿಕೇರಿಯ ಸುಂದರ ತಾಣಗಳಲ್ಲಿ ವಿಜಯಲಕ್ಷ್ಮಿ ಸಿಂಗ್ ಎಂಜಾಯ್ ಮಾಡುತ್ತಿದ್ದಾರೆ. ಈ ಸುಂದರ ಫೋಟೋಗಳನ್ನು ವಿಜಯಲಕ್ಷ್ಮಿ ಸಿಂಗ್ ಪುತ್ರ ವೈಸಿರಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋವೊಂದನ್ನು ಕೂಡಾ ಹಂಚಿಕೊಂಡಿರುವ ವೈಸಿರಿ, ನಾವು ಪೂರ್ವಜರಿಗೆ ಗೌರವ ಸಲ್ಲಿಸಲು ಕೆರೆಕೊಪ್ಪಕ್ಕೆ ಬಂದಿದ್ದೇವೆ. ಬಹಳ ದಿನಗಳ ಬಳಿಕ ಇಲ್ಲಿ ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಇಲ್ಲಿ ನಾವು ಆರಾಮವಾಗಿ ಕಾಲ ಕಳೆಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
TAGGED:
Vijayalakshmi singh