ಫೆಬ್ರವರಿ 14,ಪ್ರೇಮಿಗಳ ಪಾಲಿಗೆ ಬಹಳ ವಿಶೇಷವಾದ ದಿನ. ಅದರಲ್ಲೂ ಪ್ರೇಮಿಗಳ ದಿನದಂದೇ ವಿವಾಹ ವಾರ್ಷಿಕೋತ್ಸವ ಇದ್ದರೆ, ಅದು ನಿಜಕ್ಕೂ ಡಬಲ್ ಸಂಭ್ರಮ. ಕಿರುತೆರೆ ನಟ ವಿಜಯ್ ಸೂರ್ಯ ಅವರ ವಿಷಯದಲ್ಲಿ ಆಗಿರುವುದು ಕೂಡಾ ಇದೇ. ಗುಳಿಕೆನ್ನೆ ಚೆಲುವ ವಿಜಯ್ ಸೂರ್ಯ ಇಂದು ವ್ಯಾಲೆಂಟೈನ್ ಡೇ ಜೊತೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ವಿವಾಹ ವಾರ್ಷಿಕೋತ್ಸವದ ಸಂಭ್ರಮದೊಂದಿಗೆ ಮತ್ತೊಂದು ಖುಷಿ ಹಂಚಿಕೊಂಡ ವಿಜಯ್ ಸೂರ್ಯ - ಮೊದಲ ವರ್ಷದ ವಾರ್ಷಿಕೋತ್ಸವ ಆಚರಿಸುತ್ತಿರುವ ವಿಜಯ್ ಸೂರ್ಯ
'ನಿಜಕ್ಕೂ ಪ್ರೇಮಿಗಳ ದಿನ ನನಗೆ ಬಹಳ ಸ್ಪೆಷಲ್, ಕಳೆದ ವರ್ಷ ಇದೇ ದಿನ ನಾನು ಚೈತ್ರಾ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದೆ. ಇದೀಗ ಮೊದಲ ವರ್ಷದ ವಿವಾಹ ಸಂಭ್ರಮದ ಜೊತೆಗೆ ನಾನು ತಂದೆಯಾಗಿದ್ದೇನೆ. ಚೈತ್ರಾ ನನಗೆ ಮಗನನ್ನು ನೀಡಿದ್ದಾರೆ, ಇದು ನನಗೆ ಬಹಳ ಖುಷಿ ನೀಡಿದೆ ಎಂದು ವಿಜಯ್ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ವಿಜಯ್ ಅಭಿಮಾನಿಗಳಿಗೆ ಅವರು ಮತ್ತೊಂದು ಶುಭಸುದ್ದಿ ನೀಡಿದ್ದಾರೆ. ವಿಜಯ್ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದು ತಮ್ಮ ಪುಟ್ಟ ಕಂದನ ಫೋಟೋವನ್ನು ಕೂಡಾ ರಿವೀಲ್ ಮಾಡಿದ್ದಾರೆ. ವಿಜಯ್ ಸೂರ್ಯ ಮತ್ತು ಚೈತ್ರಾ ದಂಪತಿ ಬಾಳಿಗೆ ಪುಟ್ಟ ಅತಿಥಿ ಆಗಮನವಾಗಿದ್ದು ಅವರ ಸಂತೋಷ ಇನ್ನೂ ಹೆಚ್ಚಾಗಿದೆ. 'ನಿಜಕ್ಕೂ ಪ್ರೇಮಿಗಳ ದಿನ ನನಗೆ ಬಹಳ ಸ್ಪೆಷಲ್, ಕಳೆದ ವರ್ಷ ಇದೇ ದಿನ ನಾನು ಚೈತ್ರಾ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದೆ. ಇದೀಗ ಮೊದಲ ವರ್ಷದ ವಿವಾಹ ಸಂಭ್ರಮದ ಜೊತೆಗೆ ನಾನು ತಂದೆಯಾಗಿದ್ದೇನೆ. ಚೈತ್ರಾ ನನಗೆ ಮಗನನ್ನು ನೀಡಿದ್ದಾರೆ, ಇದು ನನಗೆ ಬಹಳ ಖುಷಿ ನೀಡಿದೆ, ಕಂದನ ಆಗಮನದಿಂದ ನಾವೆಲ್ಲಾ ಖುಷಿಯಾಗಿದ್ದೇವೆ' ಎಂದು ವಿಜಯ್ ಹೇಳಿಕೊಂಡಿದ್ದಾರೆ.