'ಅಗ್ನಿಸಾಕ್ಷಿ' ಧಾರಾವಾಹಿಯ ಸಿದ್ಧಾರ್ಥ್ ಆಗಿ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿಸಿದ್ದ ಗುಳಿ ಕೆನ್ನೆಯ ಹ್ಯಾಂಡ್ಸಮ್ ಹುಡುಗ ವಿಜಯ್ ಸೂರ್ಯ,ಅಗ್ನಿಸಾಕ್ಷಿ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಮತ್ತೊಮ್ಮೆ ಧಾರಾವಾಹಿಪ್ರಿಯರ ಮನ ಸೆಳೆದಿದ್ದರು. ನಂತರ ಅವರು ಸಿನಿಮಾದಲ್ಲಿ ಬ್ಯುಸಿಯಾದರು.
ಬಹಳ ದಿನಗಳ ನಂತರ ಮತ್ತೊಮ್ಮೆ ಕಿರುತೆರೆಗೆ ವಾಪಸಾದ ವಿಜಯ್ ಸೂರ್ಯ - Vijya surya in Jote joteyli serial
'ಪ್ರೇಮಲೋಕ' ಧಾರಾವಾಹಿ ನಂತರ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದ ನಟ ವಿಜಯ್ ಸೂರ್ಯ ನಂತರ ಸಿನಿಮಾಗಳಲ್ಲಿ ಬ್ಯುಸಿ ಇದ್ದರು. ಕಿರುತೆರೆಗೆ ಅವರು ಮತ್ತೆ ಬರುತ್ತಾರೋ ಇಲ್ಲವೋ ಎಂದುಕೊಳ್ಳುತ್ತಿರುವಾಗಲೇ ಜೊತೆಜೊತೆಯಲಿ ಧಾರಾವಾಹಿಯ ಅತಿಥಿ ಪಾತ್ರದಲ್ಲಿ ವಿಜಯ್ ಸೂರ್ಯ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಯಶ್ ಫ್ಯಾನ್ಸ್ಗೆ ಗುಡ್ ನ್ಯೂಸ್...ಕೆಜಿಎಫ್-2 ಬಗ್ಗೆ ಹೊಸ ವಿಚಾರ ರಿವೀಲ್ ಮಾಡಿದ ಚಿತ್ರತಂಡ
ಇತ್ತೀಚೆಗಷ್ಟೇ ಪ್ರೇಮಲೋಕ ಧಾರಾವಾಹಿ ಮುಗಿದಿದ್ದು, ಸದ್ಯ ಕಿರುತೆರೆಯತ್ತ ಬರುವುದು ಸಂಶಯ ಎಂಬ ಮಾತುಗಳನ್ನು ವಿಜಯ್ ಸೂರ್ಯ ಹೇಳಿದ್ದರು. ಆದರೆ ಅವರು ಕಂ ಬ್ಯಾಕ್ ಆಗಿದ್ದಾರೆ. ಸೀರಿಯಲ್ ವೀಕ್ಷಕರ ಮನ ಗೆದ್ದ ವಿಜಯ್ ಸೂರ್ಯ ಕಿರುತೆರೆಗೆ ಮರಳುತ್ತಿದ್ದಾರೆ. ಅಂದ ಹಾಗೇ ವಿಜಯ್ ಸೂರ್ಯ ಧಾರಾವಾಹಿಯೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಜನಪ್ರಿಯ ಧಾರಾವಾಹಿ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಒಂದಷ್ಟು ದಿನಗಳ ಕಾಲ ವಿಜಯ್ ಸೂರ್ಯ ನಟಿಸಲಿದ್ದು ಅತಿಥಿ ಪಾತ್ರದ ಮೂಲಕ ಮೋಡಿ ಮಾಡಲಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪೋಷಕರು ಅನು ಸಿರಿಮನೆಗೆ ಮದುವೆ ಮಾಡುವ ನಿರ್ಧಾರ ಮಾಡಿರುತ್ತಾರೆ. ಆದರೆ ಅನು, ಆರ್ಯವರ್ಧನ್ ಅವರನ್ನು ಪ್ರೀತಿಸುತ್ತಿರುತ್ತಾಳೆ. ಈ ವಿಚಾರವನ್ನು ಅನು ಅಪ್ಪನಿಗೆ ಹೇಳಿರುವುದಿಲ್ಲ. ಅನು ಪ್ರೀತಿ ವಿಚಾರ ತಿಳಿದ ಸುಬ್ಬು, ಮುದ್ದಿನ ಮಗಳಿಗೆ ಗಂಡು ಹುಡುಕುವ ಕಾರ್ಯದಲ್ಲಿ ಬ್ಯುಸಿಯಾಗಿರುತ್ತಾರೆ. ಮದುವೆಯಾಗುವ ಹುಡುಗನಾಗಿ ವಿಜಯ್ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ.ಆ ಮೂಲಕವಾದರೂ ತಮ್ಮ ನೆಚ್ಚಿನ ನಟನನ್ನು ಮತ್ತೆ ಕಿರುತೆರೆಯಲ್ಲಿ ನೋಡಿ ಕಣ್ತುಂಬಿಸಿಕೊಳ್ಳುವ ಭಾಗ್ಯ ವೀಕ್ಷಕರಿಗೆ ದೊರೆತಿದೆ.