ಕರ್ನಾಟಕ

karnataka

ETV Bharat / sitara

ಹಿರಿಯ ಬೆಂಗಾಲಿ ನಟ ಸೌಮಿತ್ರ ಚಟರ್ಜಿಗೆ ಕೊರೊನಾ ಸೋಂಕು - ಬೆಂಗಾಲಿ ನಟ ಸೌಮಿತ್ರ ಚಟರ್ಜಿಗೆ ಕೊರೊನಾ

ಹಿರಿಯ ಬೆಂಗಾಲಿ ನಟ ಸೌಮಿತ್ರ ಚಟರ್ಜಿಯವರಿಗೆ ಕೊರೊನಾ ಸೋಂಕು ತಗುಲಿದೆ.

soumitra chatterjee helath updates
ನಟ ಸೌಮಿತ್ರ ಚಟರ್ಜಿಗೆ ಕೊರೊನಾ ಸೋಂಕು

By

Published : Oct 6, 2020, 3:59 PM IST

ಕೊಲ್ಕತ್ತಾ: ಹಿರಿಯ ಬೆಂಗಾಲಿ ನಟ ಸೌಮಿತ್ರ ಚಟರ್ಜಿಗೆ ಕೊರೊನಾ ಸೋಂಕು ತಗುಲಿದ್ದು, ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ನಟ ಸೌಮಿತ್ರ ಅನಾರೋಗ್ಯದಿಂದ ಬಳಲುತ್ತಿದ್ದರು, ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸೌಮಿತ್ರ ಚಟರ್ಜಿಯವರು ಫೆಲುಡಾ ಕಾದಂಬರಿ ಆಧಾರಿತ ರೇ ಫೆಲುಡಾ ಸೀರಿಸ್​ನಲ್ಲಿ ನಟಿಸಿ ಪ್ರಸಿದ್ದಿಯನ್ನು ಪಡೆದಿದ್ದಾರೆ. ಇದಲ್ಲದೆ, ಇತರ ಪ್ರಮುಖ ಚಿತ್ರಗಳಾದ ಅಪುರ್ ಸಂಸರ್ (ದಿ ವರ್ಲ್ಡ್ ಆಫ್ ಅಪು), ಅಪರಾಜಿತೋ (ದಿ ಅನ್ವಾಂಕ್ವಿಶ್ಡ್), ಚಾರುಲತಾ (ದಿ ಲೋನ್ಲಿ ವೈಫ್), ಅರಣ್ಯರ್ ದಿನ್ ರಾತ್ರಿ (ಡೇಸ್ ಅಂಡ್ ನೈಟ್ಸ್ ಇನ್ ಎ ಫಾರೆಸ್ಟ್ ) ಮತ್ತು ಅಶಾನಿ ಸಂಕೆಟ್ (ಡಿಸ್ಟೆಂಟ್​ ಥಂಡರ್) ನಲ್ಲಿ ತನ್ನ ನಟನಾ ಕೌಶಲ್ಯ ತೋರಿಸಿ ಭಾರತೀಯ ಚಿತ್ರ ರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದಾರೆ.

ABOUT THE AUTHOR

...view details