ಕರ್ನಾಟಕ

karnataka

ETV Bharat / sitara

ಬೆಳ್ಳಿತೆರೆಯ ವಿಲನ್ ಈಗ ಕಿರುತೆರೆಯಲ್ಲಿ ಕೂಡಾ ಬ್ಯುಸಿ - Ashalata busy in Small screen

'ಶ್ರೀ ಕೃಷ್ಣದೇವರಾಯ' ಸಿನಿಮಾ ಮೂಲಕ ಆ್ಯಕ್ಟಿಂಗ್ ಆರಂಭಿಸಿದ ಆಶಾಲತ ಬೆಳ್ಳಿತೆರೆಯಲ್ಲಿ ಹೆಸರು ಮಾಡಿರುವುದಲ್ಲದೆ ಈಗ ಕಿರುತೆರೆಯಲ್ಲಿ ಕೂಡಾ ಬ್ಯುಸಿಯಾಗಿದ್ದಾರೆ. ನಾಗಿಣಿ, ಜೋಕಾಲಿ, ಸೇವಂತಿ ಧಾರಾವಾಹಿಗಳೊಂದಿಗೆ ಸದ್ಯಕ್ಕೆ 'ಕಮಲಿ' ಧಾರಾವಾಹಿಯಲ್ಲಿ ಅಂಬಿಕಾ ಅಜ್ಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Veteran actress Ashalata
ಆಶಾಲತ

By

Published : Dec 4, 2020, 2:14 PM IST

ಸಿನಿಮಾದಲ್ಲಿ ಹೆಸರು ಮಾಡಿರುವ ಅನೇಕ ನಟ-ನಟಿಯರು ಕಿರುತೆರೆಯಲ್ಲಿ ಕೂಡಾ ನಟಿಸುವುದು ಸಾಮಾನ್ಯವಾದ ಸಂಗತಿ. ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಹೆಸರಾಗಿರುವ ಆಶಾಲತ ನಿಮಗೆಲ್ಲಾ ಗೊತ್ತು. ಆಶಾಲತ ಸದ್ಯಕ್ಕೆ 'ಕಮಲಿ' ಧಾರಾವಾಹಿಯಲ್ಲಿ ಅಂಬಿಕಾ ಅಜ್ಜಿ ಆಗಿ ನಟಿಸುತ್ತಿದ್ದಾರೆ.

'ಕಮಲಿ' ಧಾರಾವಾಹಿಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಿರುವ ಆಶಾಲತ

ಆಶಾಲತ 'ಶ್ರೀ ಕೃಷ್ಣದೇವರಾಯ' ಸಿನಿಮಾ ಮೂಲಕ ಆ್ಯಕ್ಟಿಂಗ್ ಲೋಕಕ್ಕೆ ಬಂದವರು. ಪೋಷಕ ಪಾತ್ರಗಳಲ್ಲಿ ನಟಿಸಿ ಹೆಸರಾಗಿರುವ ಆಶಾಲತ ಬಹಳಷ್ಟು ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳಲ್ಲೇ ನಟಿಸಿದ್ದಾರೆ. ಆಶಾಲತ ಎಂದಿಗೂ ಆ್ಯಕ್ಟಿಂಗ್​​​ಗೆ ಬರಬೇಕು ಎಂದುಕೊಂಡವರಲ್ಲ. ಆಶಾಲತ ಅವರ ತಾಯಿ ಗುಬ್ಬಿವೀರಣ್ಣ ವಂಶಸ್ಥರು. ಇಂದು ನಟನೆಯಲ್ಲಿ ದೊಡ್ಡ ಹೆಸರು ಮಾಡಿರುವ ಆಶಾಲತಾಗೆ ಕಲೆ ರಕ್ತಗತವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ಆಶಾಲತ ಅವರ ತಂದೆಗೆ ಮಗಳಿಗೆ ಡಾಕ್ಟರ್​​​​​​​​​ ಮಾಡಬೇಕೆಂಬ ಆಸೆ ಇತ್ತು. ಆದರೆ 10ನೇ ತರಗತಿ ಓದುತ್ತಿದ್ದಾಗ ತಂದೆ ಮರಣ ಹೊಂದಿದರು. ತಂದೆಯ ಅಕಾಲಿಕ ಮರಣ ದುಡಿಯುವ ಅನಿವಾರ್ಯತೆ ಸೃಷ್ಟಿಸಿತು. ಅದಕ್ಕಾಗಿ ಬಣ್ಣದ ಲೋಕಕ್ಕೆ ಬಂದ ಆಶಾಲತ ನಂತರ ಸಂಪೂರ್ಣ ನಟನೆಯಲ್ಲೇ ಗುರುತಿಸಿಕೊಂಡರು.

ಹಿರಿಯ ನಟಿ ಆಶಾಲತ

ತಮ್ಮ 45 ವರ್ಷಗಳ ವೃತ್ತಿ ಜೀವನದಲ್ಲಿ ಬಹುತೇಕ ಎಲ್ಲಾ ಬಗೆಯ ಪಾತ್ರಗಳನ್ನು ಆಶಾಲತ ನಿರ್ವಹಿಸಿದ್ದಾರೆ. 'ನಾಗಿಣಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಅಜ್ಜಿಯಾಗಿ ನಟಿಸಿರುವ ಇವರು, ಜೋಕಾಲಿಯಲ್ಲಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಅಜ್ಜಿಯಾಗಿ ಕೂಡಾ ಅಭಿನಯಿಸುತ್ತಿರುವ ಆಶಾಲತಾ 'ಕಮಲಿ' ಧಾರಾವಾಹಿಯಲ್ಲಿ ಅಂಬಿಕಾ ಅಜ್ಜಿಯಾಗಿ ಕೂಡಾ ನಟಿಸುತ್ತಿದ್ದಾರೆ.

ABOUT THE AUTHOR

...view details