ಕರ್ನಾಟಕ

karnataka

ETV Bharat / sitara

ಶ್ರೀನಿವಾಸಮೂರ್ತಿ ಅವರ 'ಕನಕದಾಸರು' ಧಾರಾವಾಹಿಗೆ ಮತ್ತೆ ಜೀವ ಬರಲಿದ್ಯಾ...? - Former CM HDK

7 ವರ್ಷಗಳ ಹಿಂದೆ ಹಿರಿಯ ನಟ ಶ್ರೀನಿವಾಸ ಮೂರ್ತಿ ಬಹಳ ಇಷ್ಟಪಟ್ಟು ನಿರ್ದೇಶಿಸುತ್ತಿದ್ದ ಕನಕದಾಸರು ಧಾರಾವಾಹಿ ಕೆಲವು ಕಂತುಗಳ ನಿರ್ಮಾಣದ ನಂತರ ನಿಂತುಹೋಯ್ತು. ಆದರೆ ಇಂದಿಗೂ ಧಾರಾವಾಹಿಯನ್ನು ಮತ್ತೆ ಆರಂಭಿಸಲು ಕನಸು ಅವರಲ್ಲಿ ಜೀವಂತವಾಗಿದೆ.

Veteran actor Shrinivasmurthy
ಶ್ರೀನಿವಾಸಮೂರ್ತಿ

By

Published : Aug 27, 2020, 9:59 AM IST

ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಶ್ರೀನಿವಾಸಮೂರ್ತಿ ನಟನೆ ಮಾತ್ರವಲ್ಲ ನಿರ್ದೇಶನದಲ್ಲೂ ಪಳಗಿದ್ದಾರೆ. ಕಿರುತೆರೆಯಲ್ಲಿ ನಿರ್ದೇಶಕರಾಗಿ ಈಟಿವಿಗೆ 'ಅಣ್ಣ ಬಸವಣ್ಣ' 108 ಕಂತುಗಳ ಧಾರಾವಾಹಿಯನ್ನು ತಲಾ ಒಂದು ಗಂಟೆ ಅವಧಿಗೆ ಅವರು ನಿರ್ದೇಶನ ಮಾಡಿದವರು.

ಶ್ರೀನಿವಾಸ ಮೂರ್ತಿ 400 ಸಿನಿಮಾಗಳಲ್ಲಿ ನಟನೆ ಮಾಡಿದ್ದರೂ ಅವರಿಗೆ ಸುಗ್ಗನಹಳ್ಳಿ ರುದ್ರಮೂರ್ತಿ ಶಾಸ್ತ್ರಿಗಳ ಕನಕದಾಸರ ಚರಿತ್ರೆ ಬಹಳವಾಗಿ ಕಾಡುತ್ತಾ ಇತ್ತು. ಇದನ್ನು ಕನ್ನಡದ ಖಾಸಗಿ ವಾಹಿನಿಗೆ ಧಾರಾವಾಹಿ ಮಾಡೋಣ ಎಂದು 2013 ರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​​​.ಡಿ. ಕುಮಾರಸ್ವಾಮಿ ಮುಂದೆ ಬಂದರು.

2013 ರಲ್ಲಿ ಬೆಂಗಳೂರಿನ ಸೆಂಚುರಿ ಕ್ಲಬ್​​​ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೆಚ್​​​​​ಡಿಕೆ ಭಾಗವಹಿಸಿದ್ದರು. ಕನಕದಾಸರು ಧಾರಾವಾಹಿ 300 ಕಂತುಗಳಲ್ಲಿ ಬರಲಿದೆ ಎಂದು ಹೇಳಿಕೊಂಡಿದ್ದರು. ಹುಳಿಮಾವು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮುಹೂರ್ತ ಆಚರಿಸಿ ರವಿ ಕಿರಣ್ ಎಸ್ಟೇಟ್​​​ನಲ್ಲಿ ಕೆಲವು ಕಂತುಗಳ ಚಿತ್ರೀಕರಣ ಕೂಡಾ ನಡೆದಿತ್ತು.

ಶ್ರೀನಿವಾಸ ಮೂರ್ತಿ, ಮಾಜಿ ಸಿಎಂ ಹೆಚ್​​​​.ಡಿ. ಕುಮಾರಸ್ವಾಮಿ

ವೃದ್ಧ ಕನಕದಾಸರ ಪಾತ್ರವನ್ನು ಶ್ರೀನಿವಾಸ ಮೂರ್ತಿ, ಮಕ್ಕಳಾದ ನಿಟಿಲ್ ಕೃಷ್ಣ ಹಾಗೂ ನವೀನ್ ಕೃಷ್ಣ ಮಧ್ಯ ವಯಸ್ಸಿನ ಪಾತ್ರ ಹಾಗೂ ಬಾಲ ಕನಕನ ಪಾತ್ರವನ್ನು ಮೊಮ್ಮಗ ಹರ್ಷಿತ್ ಹಾಗೂ ರಂಗಪ್ಪ ಪಾತ್ರವನ್ನು ರಮೇಶ್ ಭಟ್ ಮಾಡುವುದು ಎಂದು ನಿರ್ಧರಿಸಲಾಗಿತ್ತು. ಅಷ್ಟೇ ಅಲ್ಲ, ಈ ಧಾರಾವಾಹಿಗೆ ಮುತ್ತುರಾಜ್ ಛಾಯಾಗ್ರಹಣ, ವಸಂತ್ ಕಲಾ ನಿರ್ದೇಶನ, ಸರಿಗಮ ವಿಜಿ ಎಪಿಸೋಡ್ ನಿರ್ದೇಶಕ, ರಶ್ಮಿ ಹರಿಪ್ರಸಾಸ್, ಶ್ವೇತ, ಭಾನುಪ್ರಕಾಶ್ ಅವರನ್ನು ಇತರ ಪಾತ್ರಗಳಿಗೆ ಸೇರಿ ಒಟ್ಟು 45 ಕಲಾವಿದರ ತಂಡ ಕೂಡಾ ಸಿದ್ಧ ಆಗಿತ್ತು.

ಆದ್ರೆ ಮುಹೂರ್ತ ನಡೆದು ಕೆಲವು ದಿನಗಳ ಚಿತ್ರೀಕರಣದ ನಂತರ ಕಾರಣಾಂತರಗಳಿಂದ ಧಾರಾವಾಹಿ ನಿಂತುಹೋಯ್ತು. ಧಾರಾವಾಹಿ ನಿಂತು 7 ವರ್ಷಗಳು ಕಳೆದಿವೆ. ಆದರೆ ಶ್ರೀನಿವಾಸ ಮೂರ್ತಿ ಅವರಿಗೆ ಮಾತ್ರ ಕನಕದಾಸರ ಜೀವನವನ್ನು ಕಿರುತೆರೆ ಮೇಲೆ ತರುವ ಆಸೆ ಮಾತ್ರ ಇಂದಿಗೂ ಜೀವಂತವಾಗಿದೆ.

ABOUT THE AUTHOR

...view details