ಬೆಂಗಳೂರು: ಅತ್ಯಂತ ಕುತೂಹಲ ಮೂಡಿಸಿರುವ ಕನ್ನಡ ಕಿರುತೆರೆಯ ಕಾರ್ಯಕ್ರಮ ವೀಕೆಂಡ್ ವಿಥ್ ರಮೇಶ್ ಸೀಸನ್ 4 ಶೀಘ್ರದಲ್ಲೇ ಆರಂಭವಾಗಲಿದೆ. ಇದೀಗ ಈ ಸೀಸನ್ನ ಮೊದಲ ಸಂಚಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಧಕರ ಸೀಟ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮೂಲಗಳಿಂದ ಖಚಿತವಾಗಿದೆ.
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಮೊದಲ ಸಾಧಕ! - undefined
ವೀಕೆಂಡ್ ವಿಥ್ ರಮೇಶ್ ಸೀಸನ್ 4 ಶೀಘ್ರದಲ್ಲೇ ಆರಂಭವಾಗಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಧಕರ ಸೀಟ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಟ ರಮೇಶ್ ಅರವಿಂದ್ ಈ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ಜೀ ವಾಹಿನಿ ಈ ಕಾರ್ಯಕ್ರಮ ಪ್ರಾರಂಭದ ಸೂಚನೆ ನೀಡಿದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಧಕರ ಬಗ್ಗೆ ಚರ್ಚೆ ಹೆಚ್ಚಾಗಿತ್ತು. ಅನೇಕ ಮಂದಿಯ ಹೆಸರುಗಳನ್ನು ವೀಕ್ಷಕರೇ ಬರೆಯತೊಡಗಿದರು. ಹೀಗಾಗಿ,ಇದೇ ಮೊದಲ ಬಾರಿಗೆ ವಾಹಿನಿಯು ಈ ಕಾರ್ಯಕ್ರಮದಲ್ಲಿ ಅತಿಥಿಗಳು ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ವೀಕ್ಷಕರಿಗೇ ಬಿಟ್ಟಿದೆ. ಮೂಲಗಳ ಪ್ರಕಾರ ಮೊದಲ ಸಂಚಿಕೆಯಲ್ಲಿ ವೀರೇಂದ್ರ ಹೆಗ್ಗಡೆ ಬರುವುದು ಖಚಿತವಾಗಿದೆ. ಇವರ ಹೊರತಾಗಿ ಕಾರ್ಯಕ್ರಮಕ್ಕೆ ಯಾವ ಸಾಧಕರನ್ನು ಕರೆತರಬೇಕು ಎಂಬುದನ್ನು ವೀಕ್ಷಕರು ಹೇಳುವ ಅವಕಾಶವನ್ನು ವಾಹಿನಿ ನೀಡಿದೆ.
ಇನ್ನು ಸ್ಟಾರ್ ಸುವರ್ಣ ಮನರಂಜನೆ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸುವ ‘ಕನ್ನಡದ ಕೋಟ್ಯಾಧಿಪತಿ’ ರಿಯಾಲಿಟಿ ಶೋ ಶುರುವಾಗಲಿದೆ. ಎರಡೂ ಕಾರ್ಯಕ್ರಮಗಳು ಒಟ್ಟಾಗಿ ನಾಲ್ಕನೇ ಸೀಸನ್ಗೆ ಕಾಲಿಡುತ್ತಿವೆ. ಬೇರೆ ಬೇರೆ ವಾಹಿನಿಯಾದ ಕಾರಣ ಪೈಪೋಟಿ ಹೆಚ್ಚಿರುತ್ತದೆ. ಕನ್ನಡ ಕೋಟ್ಯಾಧಿಪತಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿದ್ದು, ವೀಕೆಂಡ್ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತದೆ. ಈ ಎರಡು ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ ಮಾತ್ರ ಇನ್ನೂ ರಿವಿಲ್ ಆಗಿಲ್ಲ.