ಕನ್ನಡದ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ' ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಾತ್ರವಲ್ಲ ಪ್ರತಿ ಸಂಚಿಕೆಯೂ ವೀಕ್ಷಕರ ಕುತೂಹಲ ಹೆಚ್ಚಿಸಿಕೊಳ್ಳುವಂತೆ ಮಾಡುತ್ತಿದೆ. ಕಥೆಯಲ್ಲಿ ಹೊಸತನ ತರಲು ತಂಡ ಪ್ರಯತ್ನಿಸುತ್ತಿದ್ದು, ಇದೀಗ ಪ್ರೀತಿಯನ್ನು ಸಂಭ್ರಮಿಸಲು ಗಟ್ಟಿಮೇಳ ತಂಡ ಸಜ್ಜಾಗಿದೆ. ಅದಕ್ಕಾಗಿ ಹೊಸ ಲೊಕೇಶನ್ವೊಂದನ್ನು ಧಾರಾವಾಹಿ ತಂಡ ಆಯ್ಕೆ ಮಾಡಿದೆ.
ಪ್ರೇಮಸೌಧದ ಮುಂದೆ ಅಮೂಲ್ಯಗೆ ಪ್ರೇಮ ನಿವೇದನೆ ಮಾಡ್ತಾರಂತೆ ವೇದಾಂತ್...! - Gattimela serial Amulya
ವಿಭಿನ್ನ ಪ್ರೇಮಕಥೆ ಹೊಂದಿರುವ ಜೀ ಕನ್ನಡದ 'ಗಟ್ಟಿಮೇಳ' ಧಾರಾವಾಹಿ ದಿನದಿಂದ ದಿನಕ್ಕೆ ನೋಡುಗರ ಕುತೂಹಲ ಕೆರಳಿಸಿದೆ. ನಾಯಕ ವೇದಾಂತ್ ತಾನು ಪ್ರೀತಿಸುತ್ತಿರುವ ಅಮೂಲ್ಯಗೆ ತಾಜ್ಮಹಲ್ ಎದುರು ಪ್ರಪೋಸ್ ಮಾಡುವ ಸಂಚಿಕೆ ಶೀಘ್ರದಲ್ಲೇ ಪ್ರಸಾರವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ:ತಮ್ಮ ಆರೋಗ್ಯ ಸಮಸ್ಯೆ ಬಹಿರಂಗಪಡಿಸಿದ ಕಾಜಲ್ ಅಗರ್ವಾಲ್
ಈ ಹೊಸ ಲೊಕೇಶನ್ನಲ್ಲಿ ಗಟ್ಟಿಮೇಳ ತಂಡ ಶೂಟಿಂಗ್ನಲ್ಲಿ ಬ್ಯುಸಿ ಆಗಿದೆ. ಸಾಮಾನ್ಯವಾಗಿ ಒಳಾಂಗಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡುತ್ತಿದ್ದ ಧಾರಾವಾಹಿ ತಂಡ ಈಗ ಮುಂದಿನ ಸಂಚಿಕೆಗಳನ್ನು ಆಗ್ರಾದಲ್ಲಿ ಚಿತ್ರೀಕರಿಸುತ್ತಿದೆ. ಧಾರಾವಾಹಿಯ ಕಲಾವಿದರು ಹಾಗೂ ಸಿಬ್ಬಂದಿ ಆಗ್ರಾದಲ್ಲಿ ಶೂಟಿಂಗ್ ಮಾಡಲು ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿ ತಂಡ ದೆಹಲಿಗೆ ತೆರಳಿದ್ದು ಅಲ್ಲಿಂದ ಆಗ್ರಾದ ತಾಜ್ ಮಹಲ್ಗೆ ಹೊರಟಿದೆ. ಧಾರಾವಾಹಿ ಕಲಾವಿದರು ಲೋಕೇಶನ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯದ ಕಥೆಯಂತೆ ತಾಜ್ ಮಹಲ್ ಎದುರು ನಡೆಯುವ ಶೂಟಿಂಗ್ ವೇದಾಂತ್ ಹಾಗೂ ಅಮೂಲ್ಯ ಪ್ರೇಮಕಥೆಗೆ ಮೆರುಗು ತರಲಿದೆ. ಮುಂದಿನ ಸಂಚಿಕೆಗಳಲ್ಲಿ ಪ್ರೀತಿಯ ಸಂಕೇತ ತಾಜ್ಮಹಲ್ಎದುರು ವೇದಾಂತ್ ಅಮೂಲ್ಯ ಬಳಿ ಪ್ರಪೋಸ್ ಮಾಡಿ, ಮದುವೆ ಪ್ರಸ್ತಾಪ ಮಾಡಲಿದ್ದಾನೆ ಎನ್ನಲಾಗಿದೆ. ಪ್ರೇಮಿಗಳ ದಿನದ ವಿಶೇಷವಾಗಿ ಈ ಸಂಚಿಕೆಗಳು ಪ್ರಸಾರ ಆಗಲಿದ್ದು ಈ ಎಪಿಸೋಡ್ಗಳು ವೀಕ್ಷಕರನ್ನು ಹೇಗೆ ಸೆಳೆಯಲಿದೆ ಕಾದು ನೋಡಬೇಕು.