ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಚಿತ್ರಗಳನ್ನು ಮಾಡಿ ತನ್ನದೇ ಛಾಪು ಮೂಡಿಸಿಕೊಂಡಿರುವ ನಟ ವಿನೋದ್ ಪ್ರಭಾಕರ್ 'ರಾಬರ್ಟ್' ಚಿತ್ರದಲ್ಲಿ ದರ್ಶನ್ ಸ್ನೇಹಿತನಾಗಿ ಸಿನಿ ಪ್ರಿಯರ ಮನಸ್ಸು ಕದ್ದಿದ್ದರು. ಇದೇ ಜೋಶ್ನಲ್ಲಿ ಇದೀಗ ವಿನೋದ್ ಪ್ರಭಾಕರ್ ಮತ್ತೊಂದು ಆಕ್ಷನ್ ಜೊತೆಗೆ ಬರ್ತಿದ್ದಾರೆ.
ವಿನೋದ್ ಪ್ರಭಾಕರ್ ನಟನೆಯ ಚಿತ್ರಕ್ಕೆ 'ವರದ' ಎಂಬಾ ಟೈಟಲ್ ಇಟ್ಟಿದ್ದು, ಬಹುತೇಕ ಚಿತ್ರೀಕರಣ ಮುಗಿಸಿ, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಆಟೋರಾಜ' ಚಿತ್ರ ನಿರ್ದೇಶನ ಮಾಡಿರುವ ಉದಯ್ ಪ್ರಕಾಶ್ ಈ ಸಿನಿಮಾಕ್ಕೆ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಇಂದು 'ವರದ' ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು ಈ ವೇಳೆ ವಿನೋದ್ ಪ್ರಭಾಕರ್, ಹಿರಿಯ ನಟ ಚರಣ್ ರಾಜ್, ನಿರ್ದೇಶಕ ಉದಯ್ ಪ್ರಕಾಶ್, ಕ್ಯಾಮೆರಾಮನ್ ಭಜರಂಗಿ ಆನಂದ್, ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.
ವರದ' ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಕಾರ್ಯಕ್ರಮ ಚಿತ್ರದ ಕುರಿತು ಹಿರಿಯ ನಟ ಚರಣ್ ರಾಜ್ ಮಾತನಾಡಿ, ನಿರ್ದೇಶಕ ಉದಯ್ ಪ್ರಕಾಶ್ ಅವರಿಗೋಸ್ಕರ ಈ ಸಿನಿಮಾ ಒಪ್ಪಿಕೊಂಡೆ. ವಿನೋದ್ ಪ್ರಭಾಕರ್ ಕೂಡ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದರು.
ಇನ್ನು ವಿನೋದ್ ಪ್ರಭಾಕರ್ ಮಾತನಾಡಿ, 'ವರದ' ಸಿನಿಮಾಕ್ಕಾಗಿ ಆಕ್ಷನ್ ಮಾಡುವ ಸಂದರ್ಭದಲ್ಲಿ ಎಡಗಾಲು ಮುರಿದಿತ್ತು. ಹೀಗಾಗಿ ಸಿನಿಮಾ ತಡವಾಯಿತ್ತು. ಸಿನಿಮಾದಲ್ಲಿ ಆಕ್ಷನ್ ಜೊತೆಗೆ ಅಪ್ಪ ಮಗನ ಸೆಂಟಿಮೆಂಟ್ ಬೊಂಬಾಟ್ ಆಗಿ ಮೂಡಿ ಬಂದಿದೆ ಅಂದರು.
ಈ ಸಿನಿಮಾಕ್ಕೆ ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದರೆ, ಭಜರಂಗಿ ಆನಂದ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು, ಕುಂದಾಪುರ, ಉಡುಪಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ವಿನೋದ್ ಪ್ರಭಾಕರ್ಗೆ ಜೋಡಿಯಾಗಿ ಅಮಿತಾ ರಂಗನಾಥ್ ನಟಿಸಿದ್ದಾರೆ. ಜೊತೆಗೆ ಅನಿಲ್ ಸಿದ್ದು, ಅಶ್ವಿನಿ ಗೌಡ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಕೊರೊನಾ ಮುಗಿದು, ಚಿತ್ರಮಂದಿರದಗಳು ಓಪನ್ ಆದ ಮೇಲೆ ವರದ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ದೇಶಕ ಉದಯ್ ಪ್ರಕಾಶ್ ಪ್ಲಾನ್ ಮಾಡಿದ್ದಾರೆ.