ಕಳೆದ 8 ವರ್ಷಗಳಿಂದ ಅಗ್ನಿಸಾಕ್ಷಿಯ ಸನ್ನಿಧಿಯಾಗಿ ಕಿರುತೆರೆಯಲ್ಲಿ ಮಿಂಚಿದ್ದ ಗುಳಿ ಕೆನ್ನೆ ಚೆಲುವೆ ವೈಷ್ಣವಿ ಇದೀಗ 'ಬಹುಕೃತ ವೇಷಂ' ಸಿನಿಮಾದಲ್ಲಿ ನಕ್ಷತ್ರ ಆಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.ಇದೀಗ ನಟನೆಯ ಹೊರತಾಗಿ ವೈಷ್ಣವಿ ಗೌಡ ಸುದ್ದಿಯಲ್ಲಿದ್ದಾರೆ.
ವರ್ಕೌಟ್ ಫೋಟೋಗಳ ಮೂಲಕ ಅಭಿಮಾನಿಗಳಿಗೆ ವ್ಯಾಯಾಮದ ಮಹತ್ವ ತಿಳಿಸಿದ ಸನ್ನಿಧಿ - ಪ್ರತಿದಿನ ವರ್ಕೌಟ್ ಮಾಡುವಂತೆ ವೈಷ್ಣವಿ ಗೌಡ ಸಲಹೆ
ತಮ್ಮ ದೇಹದ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು ವರ್ಕೌಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಜನರಿಗೂ ವರ್ಕೌಟ್ನ ಮಹತ್ವ ಏನು ಎಂಬುದನ್ನು ತಿಳಿಸಿದ್ದಾರೆ.
ವೈಷ್ಣವಿ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಫೋಟೋಗಳು ಕಿರುತೆರೆ ಅಭಿಮಾನಿಗಳು ಬಹಳ ಇಷ್ಟಪಟ್ಟಿದ್ದಾರೆ. ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ತಾವು ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ತಮ್ಮ ದೇಹದ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು ವರ್ಕೌಟ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಜನರಿಗೂ ವರ್ಕೌಟ್ನ ಮಹತ್ವ ಏನು ಎಂಬುದನ್ನು ತಿಳಿಸಿದ್ದಾರೆ. 'ಪ್ರತಿದಿನ ವರ್ಕೌಟ್ ಮಾಡದಿದ್ದರೆ ನಿಜಕ್ಕೂ ಏನೋ ಕಳೆದುಕೊಂಡಂತಾಗುತ್ತದೆ. ಹೊರಗೆ ಹೋಗಿ ವರ್ಕೌಟ್ ಮಾಡಲು ಸಾಧ್ಯವಾಗದಿದ್ದರೆ ಏನಂತೆ, ಮನೆಯಲ್ಲಿ ದೇಹವನ್ನು ಸ್ಪಲ್ಪ ಸ್ಟ್ರೆಚ್ ಮಾಡಿಕೊಳ್ಳಲೇಬೇಕು. ದಿನಕ್ಕೆ ಕನಿಷ್ಠ ಪಕ್ಷ 30 ನಿಮಿಷಗಳ ಕಾಲ ವರ್ಕೌಟ್ ಮಾಡಿದರೆ ಬಹಳ ಒಳ್ಳೆಯದು. ಇದರಿಂದ ದೇಹದ ಇಮ್ಯೂನಿಟಿ ಸಿಸ್ಟಮ್ ಕೂಡಾ ಹೆಚ್ಚಾಗುತ್ತದೆ. ಆದ್ದರಿಂದ ವರ್ಕೌಟ್ ಮಾಡಿ ಆರೋಗ್ಯದಿಂದಿರಿ' ಎಂಬ ಸಂದೇಶವನ್ನು ಅಭಿಮಾನಿಗಳಿಗೆ ವೈಷ್ಣವಿ ನೀಡಿದ್ದಾರೆ.