ಖಾಸಗಿ ವಾಹಿನಿ ಜನಪ್ರಿಯ ಧಾರಾವಾಹಿಗಳಲ್ಲಿ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ 'ಅಗ್ನಿಸಾಕ್ಷಿ' ಧಾರಾವಾಹಿ ಕೂಡಾ ಒಂದು. ಕಳೆದ 5 ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ಮಹಿಳೆಯರು ಪ್ರತಿದಿನ ತಪ್ಪದೆ ನೋಡುತ್ತಿದ್ದಾರೆ.
'ಅಗ್ನಿಸಾಕ್ಷಿ' ಧಾರಾವಾಹಿ ಬಿಡುವುದಿಲ್ಲ: ಸನ್ನಿಧಿ ಪಾತ್ರಧಾರಿ ವೈಷ್ಣವಿ ಸ್ಪಷ್ಟನೆ - undefined
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರ ಮಾಡುತ್ತಿರುವ ವೈಷ್ಣವಿ ಗೌಡ ನಾನು ಧಾರಾವಾಹಿಯನ್ನು ಬಿಡುವುದಿಲ್ಲ. ಕೊನೆಯವರೆಗೂ ಆ ಧಾರಾವಾಹಿಯಲ್ಲೇ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಸಿದ್ದಾರ್ಥ್ ಪಾತ್ರಧಾರಿ ವಿಜಯ್ ಇತ್ತಿಚೆಗಷ್ಟೇ ಧಾರಾವಾಹಿಯಿಂದ ಹೊರಬಂದಿದ್ದಾರೆ. 5 ವರ್ಷಗಳ ಕಾಂಟ್ರಾಕ್ಟ್ ಮುಗಿದಿದ್ದರಿಂದ ವಿಜಯ್ ಸೂರ್ಯ ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳಿ ಇದೀಗ ಹೊಸ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಈ ಧಾರಾವಾಹಿಗೆ ಪ್ರಮುಖ ಆಧಾರ ಸ್ಥಂಭ ಸನ್ನಿಧಿ. ಹೌದು, ಧಾರಾವಾಹಿಯಿಂದ ಸಿದ್ಧಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಹೊರ ನಡೆದ ನಂತರ ಧಾರಾವಾಹಿ ಹೇಗೆ ಮುಂದೆ ಸಾಗುತ್ತೆ ಎಂಬುದು ಹಲವರ ಪ್ರಶ್ನೆಯಾಗಿತ್ತು.
ಆದರೆ, ಇಡೀ ಧಾರಾವಾಹಿಯನ್ನು ಮುನ್ನಡೆಸಲು ಸನ್ನಿಧಿ ಅಲಿಯಾಸ್ ವೈಷ್ಣವಿ ಮುಂದಾಗಿದ್ದಾರೆ. 'ಅಗ್ನಿಸಾಕ್ಷಿ' ಸೀರಿಯಲ್ ಮುಗಿಯುವವರೆಗೂ ಸನ್ನಿಧಿ ಪಾತ್ರಧಾರಿಯಾಗಿ ನಟಿಸುತ್ತೇನೆ. ಧಾರಾವಾಹಿಯಿಂದ ಹೊರ ಹೋಗುವುದಿಲ್ಲ ಎಂದು ವೈಷ್ಣವಿ ಹೇಳಿದ್ದಾರೆ. ಇದರೊಂದಿಗೆ ಹೊಸ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಕೂಡಾ ನಟಿಸುತ್ತೇನೆ ಎಂದು ವೈಷ್ಣವಿ ಹೇಳಿದ್ದಾರೆ.