ಫಿನಾಲೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಇಂತಹ ಸಂದರ್ಭದಲ್ಲಿ ಬಿಗ್‍ಬಾಸ್ ಸ್ಪರ್ಧಿಗಳಿಗೆ ಈ ಮನೆಯಲ್ಲಿ ಈಡೇರದ ಒಂದು ಆಸೆಯನ್ನು ಕೇಳಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ. ಮನೆಯಲ್ಲಿ ಈಡೇರದೆ ಇರುವ ಆಸೆಗಳಿದ್ದರೆ, ಅಂತವುಗಳ ಬಗ್ಗೆ ಸ್ಪರ್ಧಿಗಳು ಹೇಳಿಕೊಂಡಿದ್ದಾರೆ.
ಗಾರ್ಡನ್ ಏರಿಯಾದಲ್ಲಿ ಒಂದು ಕಿವಿ ಆಕೃತಿ ಇಡಲಾಗಿದೆ. ಅಲ್ಲಿಗೆ ಒಬ್ಬೊಬ್ಬರಾಗಿ ಬಂದು ತಮ್ಮ ಬೇಡಿಕೆಗಳನ್ನು ಹೇಳಬಹುದು. ನಿಮ್ಮ ಆಸೆ ಈಡೇರಿಸಲು ಸಾಧ್ಯವಾಗುವಂತಿದ್ದರೆ ಈಡೇರಿಸಲಾಗುವುದು ಎಂದು ಬಿಗ್‍ಬಾಸ್ ಭರವಸೆ ನೀಡಿದ್ದರು. ಅದರಂತೆ ಮನೆಯ ಆರು ಮಂದಿ ಸದಸ್ಯರು ತಮ್ಮ ಬೇಡಿಕೆಗಳನ್ನು ಕೇಳಿಕೊಂಡಿದ್ದಾರೆ.
ವೈಷ್ಣವಿ:ಮನೆಯಿಂದ ಒಂದು ವಾಯ್ಸ್ ನೋಟ್ ಬೇಕು. ಮನೆಯವರು ಮಾತನಾಡಲು ನಾಚಿಕೆ ಪಡುತ್ತಾರೆ. ಆದರೂ ನೋಡಿ ಎಂದಿದ್ದಾರೆ.
ಮಂಜು ಪಾವಗಡ:ಬಿಗ್‍ಬಾಸ್ ಫಿನಾಲೆ ಹತ್ತಿರವಾಗುತ್ತಿದೆ, ಶಿವರಾಜ್ ಕುಮಾರ್ ಅವರ ಆಶೀರ್ವಾದ ಬೇಕು. ವಿಡಿಯೋ ಅಥವಾ ವಾಯ್ಸ್ ಕೇಳಿಸಿ ಎಂಬುದು ಮಂಜು ಮನವಿ.
ಅರವಿಂದ್:ನಾನು ಮೊದಲು ಬಿಗ್‍ಬಾಸ್ ಎಂಟ್ರಿಗೆ ಬಂದಿರುವ ನನ್ನ ಬೈಕ್ ಗಾರ್ಡನ್ ಏರಿಯಾದಲ್ಲಿ ನೋಡಬೇಕು.
ದಿವ್ಯಾ ಉರುಡುಗ:ಸುದೀಪ್ ಸರ್ ಮಾಡಿರುವ ಅಡುಗೆಯನ್ನು ಮನೆಯ ಸದಸ್ಯರು ಸೇವಿಸಬೇಕು.
ಪ್ರಶಾಂತ್ ಸಂಬರಗಿ: ನನ್ನ ಕುಟುಂಬದವರು ಬಿಗ್‍ಬಾಸ್ ಮನೆಗೆ ಬರಬೇಕು.
ದಿವ್ಯಾ ಸುರೇಶ್: ನನ್ನ ಅಮ್ಮನನ್ನು ಮನೆಗೆ ಕರೆಸಿ ಎಂದು ಕೇಳಬೇಕು ಅಂದುಕೊಂಡಿದ್ದೆ, ಆದರೆ ಕೊರೊನಾ ಇರುವ ಕಾರಣ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು ಮಂಜುಗೆ ಸ್ನೇಹಿತರ ದಿನದ ಶುಭಾಶಯ ತಿಳಿಸಬೇಕು. ಒಂದು ಟೇಬಲ್ ಅದರ ಮೇಲೆ ಕೇಕ್, ಬಲೂನ್. ನಾನು ಮಂಜು ಇರುವ ಒಂದು ಫೋಟೋವನ್ನು ಕಳುಹಿಸಿ ನಾನು ಮಂಜುಗೆ ಧನ್ಯವಾದವನ್ನು ಹೇಳಬೇಕು. ಕೇಕ್ ಹಾರ್ಟ್ ಶೆಪ್‍ನಲ್ಲಿ ಇರಲಿ. ಥ್ಯಾಂಕ್ಸ್ ಬಿಯಿಂಗ್ ಮೈ ಫ್ರೆಂಡ್ ಎಂದು ಬರೆದು ಕಳುಹಿಸಿ. ಇದು ನಾನು ಹೋಗುವಷ್ಟರಲ್ಲಿ ಸಾಧ್ಯವಾದರೆ ಈಡೇರಿಸಿ ಬಿಗ್‍ಬಾಸ್ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಒಲವಿನ ಉಡುಗೊರೆ ಮರೆಯೊಲ್ಲ... ಅರವಿಂದ್ ಅಂದ್ರೆ ನನಗಿಷ್ಟ ಎಂದ ದಿವ್ಯಾ