ಸ್ಯಾಂಡಲ್ವುಡ್ ಖ್ಯಾತ ನಟಿ, ರಾಜಕಾರಣಿ ಉಮಾಶ್ರೀ ಅವರು ಕಿರುತೆರೆ ಧಾರಾವಾಹಿಯೊಂದರಲ್ಲಿ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಉಮಾಶ್ರೀ ಪುಟ್ಮಲ್ಲಿ ಪಾತ್ರಧಾರಿಯಾಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ನಟನೆಯಷ್ಟೇ ಅಲ್ಲ, ನಿರೂಪಕಿಯಾಗಿ ಕೂಡಾ ನಿಮ್ಮ ಮುಂದೆ ಬರಲಿದ್ದಾರೆ ಉಮಾಶ್ರೀ..! - ಚಿಣ್ಣರ ಚಿಲಿಪಿಲಿ ನಡೆಸಿಕೊಡಲಿರುವ ಉಮಾಶ್ರೀ
ಇದುವರೆಗೂ ಆ್ಯಕ್ಟಿಂಗ್ ಮೂಲಕ ನಿಮ್ಮನ್ನೆಲ್ಲಾ ರಂಜಿಸಿದ ನಟಿ ಉಮಾಶ್ರೀ ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಚಿಣ್ಣರ ಚಿಲಿಪಿಲಿ' ಎಂಬ ಮಕ್ಕಳ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಆ್ಯಕ್ಟಿಂಗ್ ಜೊತೆಗೆ ಇದೀಗ ಉಮಾಶ್ರೀ, ನಿರೂಪಕಿಯಾಗಿ ನಿಮ್ಮ ಮುಂದೆ ಬರಲಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಚಿಣ್ಣರ ಚಿಲಿಪಿಲಿ' ಎಂಬ ಮಕ್ಕಳ ಕಾರ್ಯಕ್ರಮವನ್ನು ಉಮಾಶ್ರೀ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮೊದಲ ಸೀಸನನ್ನು ಪಾಪ ಪಾಂಡು ಧಾರಾವಾಹಿ ಖ್ಯಾತಿಯ ನಟಿ ಶಾಲಿನಿ ನಡೆಸಿಕೊಟ್ಟಿದ್ದರು. ಇದೀಗ ಉಮಾಶ್ರೀ, ಈ ಎರಡನೇ ಸೀಸನ್ ನಡೆಸಿಕೊಡಲಿದ್ದಾರೆ.
'ಅನುಭವ' ಚಿತ್ರದ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಉಮಾಶ್ರೀ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದುವರೆಗೂ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂದಹಾಗೆ 'ಚಿಣ್ಣರ ಚಿಲಿಪಿಲಿ' ಕಾರ್ಯಕ್ರಮ ಪ್ರಸಾರವಾಗುವ ದಿನಾಂಕವನ್ನು ವಾಹಿನಿ ಶೀಘ್ರದಲ್ಲೇ ತಿಳಿಸಲಿದೆ.