ಕರ್ನಾಟಕ

karnataka

ETV Bharat / sitara

ರಂಗಶಂಕರದಲ್ಲಿ 'ತುಘಲಕ್' ನಾಟಕ ಪ್ರದರ್ಶನ ಮಾಡಿದ ಬೆಂಗಳೂರು ಸಮುದಾಯ ತಂಡ - ಬೆಂಗಳೂರು ಸಮುದಾಯ ತಂಡದಿಂದ ತುಘಲಕ್ ನಾಟಕ ಪ್ರದರ್ಶನ

ಬೆಂಗಳೂರಿನ ಸಮುದಾಯ ತಂಡ 'ತುಘಲಕ್' ನಾಟಕವನ್ನು ನಿನ್ನೆ ಬೆಂಗಳೂರಿನ ಜೆ.ಪಿ. ನಗರದ ರಂಗಶಂಕರದಲ್ಲಿ ಪ್ರದರ್ಶನ ಮಾಡಿದ್ದಾರೆ. ಮಧ್ಯಾಹ್ನ 3.30 ಹಾಗೂ 7.30 ಕ್ಕೆ 76 ಹಾಗೂ 77ನೇ ನಾಟಕ ಪ್ರದರ್ಶನ ಕಂಡಿದೆ.

Tughlaq Play
'ತುಘಲಕ್' ನಾಟಕ ಪ್ರದರ್ಶನ

By

Published : Jan 6, 2020, 4:21 PM IST

ಆಧುನಿಕ ಕನ್ನಡ ನಾಟಕ ಇತಿಹಾಸದಲ್ಲಿ ಗಿರೀಶ್ ಕಾರ್ನಾಡರ 'ತುಘಲಕ್​' ಒಂದು ಮಹತ್ವಪೂರ್ಣವಾದ ಐತಿಹಾಸಿಕ ನಾಟಕವಾಗಿದೆ. ಮೂಲ ಇತಿಹಾಸವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೂ, ಅತ್ಯುತ್ತಮ ಕಲಾಕೃತಿಯನ್ನಾಗಿ ಮಾಡುವಲ್ಲಿ ನಾಟಕಕಾರರು ಯಶಸ್ವಿಯಾಗಿದ್ದಾರೆ.

'ತುಘಲಕ್' ನಾಟಕ ಪ್ರದರ್ಶನ

ಬೆಂಗಳೂರಿನ ಸಮುದಾಯ ತಂಡ ಈ ನಾಟಕವನ್ನು ನಿನ್ನೆ ಬೆಂಗಳೂರಿನ ಜೆ.ಪಿ. ನಗರದ ರಂಗಶಂಕರದಲ್ಲಿ ಪ್ರದರ್ಶನ ಮಾಡಿದ್ದಾರೆ. ಮಧ್ಯಾಹ್ನ 3.30 ಹಾಗೂ 7.30 ಕ್ಕೆ 76 ಹಾಗೂ 77ನೇ ನಾಟಕ ಪ್ರದರ್ಶನ ಕಂಡಿದೆ. ಸಂಕುಟ್ಟಿ ಪಟ್ಟಾಂಕರಿ ಈ ನಾಟಕದ ನಿರ್ದೇಶಕರು. 'ತುಘಲಕ್' ನಾಟಕ 13 ದೃಶ್ಯಗಳನ್ನು ಒಳಗೊಂಡಿದೆ. ನಾಟಕವು ಕ್ರಿ.ಶ 1327 ರ ತುಘಲಕ್ ಸಾಮ್ರಾಜ್ಯದ ಚಿತ್ರಣದೊಂದಿಗೆ ಆರಂಭವಾಗುತ್ತದೆ. ಮುಂದಿನ 5 ವರ್ಷಗಳವರೆಗಿನ ಆತನ ಆಳ್ವಿಕೆಯನ್ನೂ, ಆ ಅವಧಿಯ ಸಾಮ್ರಾಜ್ಯದ ಸ್ಥೂಲ ಚಿತ್ರಣವನ್ನು ನಾಟಕ ನೀಡುತ್ತದೆ. ನಾಟಕವು ಆತನ ಸಾಮ್ರಾಜ್ಯದ ಜನತೆಯನ್ನು ಕುರಿತು ನೀಡುವ ಚಿತ್ರಣಕ್ಕಿಂತ ಬಹು ಪ್ರಧಾನವಾಗಿ 'ತುಘಲಕ್' ವ್ಯಕ್ತಿತ್ವದೆಡೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದೆ.

'ತುಘಲಕ್' ನಾಟಕದ ದೃಶ್ಯ

ಮನುಷ್ಯ-ಮನುಷ್ಯನ ನಡುವಿನ ಸಂಘರ್ಷ, ಮನುಷ್ಯ ಮತ್ತು ದೈವದ ನಡುವಿನ ಸಂಘರ್ಷ, ಮನುಷ್ಯನ ವ್ಯಕ್ತಿತ್ವದ ಚಿರಕಾಲದ ಸತ್ಯಗಳು, ವ್ಯಕ್ತಿ ಮತ್ತು ರಾಜಕೀಯದ ನಡುವಿನ ಸಂಘರ್ಷ ಇಂತಹ ವಸ್ತು ವಿಷಯಗಳು ಮನುಷ್ಯನನ್ನು ಚಿರಕಾಲ ಕಾಡುವ ಸಮಸ್ಯೆಗಳಾಗಿರುತ್ತವೆ. ಇಂತಹ ಸತ್ಯಗಳ ನಿಜವಾದ ಅರ್ಥವನ್ನು ಕೃತಿಕಾರ ತನ್ನ ನಾಟಕದ ಒಡಲಿನಲ್ಲಿ ಶೋಧಿಸುವ ಪ್ರಯತ್ನವನ್ನು , ಆ ಮೂಲಕ ಆ ಸಮಸ್ಯೆಗಳಿಗೆ ಒಂದು ಅರ್ಥವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ABOUT THE AUTHOR

...view details