ಕಲರ್ಸ್ ಕನ್ನಡ ವಾಹಿನಿಯ ದೊಡ್ಡ ರಿಯಾಲಿಟಿ ಶೋ, ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ಬಾಸ್ ಸೀಸನ್ 7ಕ್ಕೆ ದಿನಗಣನೆ ಶುರುವಾಗುತ್ತಿದೆ. ಕಾರ್ಯಕ್ರಮ ಆರಂಭವಾಗಲು ಇನ್ನು ಎರಡು ದಿನಗಳಷ್ಟೇ ಬಾಕಿ ಇವೆ. ವೀಕ್ಷಕರು ಕೂಡಾ ಕುತೂಹಲದಿಂದ ಶೋ ನೋಡಲು ಕಾಯುತ್ತಿದ್ದಾರೆ.
ಬಿಗ್ಬಾಸ್ಗೆ ಕಿಚ್ಚ ಸ್ಪರ್ಧಿಯೊಬ್ಬರನ್ನ ರೆಫರ್ ಮಾಡಿದ್ದರಂತೆ: ಯಾರದು ? - ಕಿಚ್ಚ ಸುದೀಪ್ ಬಿಗ್ಬಾಸ್ಗಾಗಿ ರೆಫರ್ ಮಾಡಿದ್ದ ವ್ಯಕ್ತಿ ಯಾರು
ಬಿಗ್ಬಾಸ್ ಕಾರ್ಯಕ್ರಮದ ಸೀಸನ್ 2 ರಲ್ಲಿ ಕೊನೆಯ ಘಳಿಗೆಯಲ್ಲಿ ಸ್ಪರ್ಧಿಯೊಬ್ಬರು ಶೋಗೆ ಬರಲು ನಿರಾಕರಿಸಿದ್ದರಿಂದ, ಆ ವೇಳೆ ಕಾರ್ಯಕ್ರಮದ ಆಯೋಜಕರ ಬಳಿ ಪ್ರೇಮಾ ಸಹೋದರ ಕ್ರಿಕೆಟರ್ ಅಯ್ಯಪ್ಪ ಬಗ್ಗೆ ಹೇಳಿದ್ದೆ. ಅದೊಂದು ಬಿಟ್ಟರೆ, ಇದುವರೆಗೂ ಯಾರನ್ನೂ ಶೋಗೆ ರೆಫರ್ ಮಾಡಿಲ್ಲ ಎಂದು ಸುದೀಪ್ ಹೇಳಿದ್ದಾರೆ.
ಇನ್ನು ನಿನ್ನೆಯ ಪ್ರೆಸ್ಮೀಟ್ನಲ್ಲಿ ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಆಸಕ್ತಿಕರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. 'ನನಗೆ ಎಷ್ಟೋ ಜನ ಫೋನ್ ಮಾಡಿ ಬಿಗ್ಬಾಸ್ ಮನೆಗೆ ಎಂಟ್ರಿಯಾಗಲು ರೆಫರ್ ಮಾಡಲು ಕೇಳಿಕೊಳ್ಳುತ್ತಾರೆ. ಆದರೆ ನಾನು ಇದುವರೆಗೂ ಯಾರನ್ನೂ ಶೋಗೆ ರೆಫರ್ ಮಾಡಿಲ್ಲ. ಆದರೆ ಸೀಸನ್ 2 ರಲ್ಲಿ ಸ್ಪರ್ಧಿಯೊಬ್ಬರು ಕೊನೆ ಗಳಿಗೆಯಲ್ಲಿ ಶೋಗೆ ಬರಲು ನಿರಾಕರಿಸಿದರು. ಆ ಜಾಗಕ್ಕೆ ಒಬ್ಬರು ಸ್ಪೋರ್ಟ್ಸ್ ಪರ್ಸನ್ ಬೇಕಾಗಿದ್ದರಿಂದ ನನಗೆ ತಕ್ಷಣ ಹೊಳೆದದ್ದು ನಟಿ ಪ್ರೇಮಾ ಸಹೋದರ ಅಯ್ಯಪ್ಪ. ಆಗ ಕಾರ್ಯಕ್ರಮದ ಆಯೋಜಕರಿಗೆ ಅವರ ಬಗ್ಗೆ ಹೇಳಿದ್ದೆ ಅಷ್ಟೇ. ಮುಂದಿನ ನಿರ್ಧಾರ ತೆಗೆದುಕೊಂಡಿದ್ದು ಕಾರ್ಯಕ್ರಮದ ಆಯೋಜಕರು. ಆದರೆ ಇದುವರೆಗೂ ಯಾರನ್ನೂ ನಾನು ರೆಫರ್ ಮಾಡಿಲ್ಲ ಎಂದು ಸುದೀಪ್ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡರು. ಇನ್ನು ಅಕ್ಟೋಬರ್ 13 ರಂದು ಅಂದರೆ ಇದೇ ಭಾನುವಾರದಿಂದ ಕಾರ್ಯಕ್ರಮ ಆರಂಭವಾಗಲಿದ್ದು ಯಾರೆಲ್ಲಾ ಮನೆಯೊಳಗೆ ಹೋಗಲಿದ್ದಾರೆ ಕಾದುನೋಡಬೇಕು.