ಕರ್ನಾಟಕ

karnataka

ETV Bharat / sitara

ಹೊಸ ಧಾರಾವಾಹಿ ಮೂಲಕ ಮತ್ತೆ ಬರಲಿದ್ದಾರಾ ಟಿ.ಎನ್. ಸೀತಾರಾಮ್​​...?

ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಹೊಸ ಧಾರಾವಾಹಿಯೊಂದಿಗೆ ಮತ್ತೆ ಕಿರುತೆರೆಗೆ ವಾಪಸಾಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. 'ಮಗಳು ಜಾನಕಿ' ಧಾರಾವಾಹಿ ಅನಿರೀಕ್ಷಿತ ಮುಕ್ತಾಯದಿಂದ ಬೇಸರವಾಗಿದ್ದ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ.

TN Seetaram
ಟಿ.ಎನ್. ಸೀತಾರಾಮ್

By

Published : Mar 8, 2021, 2:11 PM IST

ಮಾಯಾಮೃಗ, ಮನ್ವಂತರ, ಮುಕ್ತ, ಮಳೆಬಿಲ್ಲು, ಮುಕ್ತ ಮುಕ್ತ, ಮಹಾಪರ್ವದ ನಂತರ 'ಮಗಳು ಜಾನಕಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ್ದ ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್​​​​​​​​​​. ಸೀತಾರಾಮ್ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ. ಸೀತಾರಾಮ್ ಮತ್ತೊಂದು ಹೊಸ ಧಾರಾವಾಹಿ ಮೂಲಕ ಮತ್ತೆ ನಿಮ್ಮ ಮುಂದೆ ಬರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ:ಬಜೆಟ್​ನಲ್ಲಿ ಚಿತ್ರರಂಗದ ಬೇಡಿಕೆಗಳ ಬಗ್ಗೆ ಫಿಲ್ಮ್​ ಚೇಂಬರ್ ಅಧ್ಯಕ್ಷರು ಹೇಳಿದ್ದೇನು?

ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಗೆ ಸಾಕಷ್ಟು ಸಂಖ್ಯೆಯ ವೀಕ್ಷಕರಿದ್ದರು. ಆದರೆ ಕೊರೊನಾ ಲಾಕ್​ಡೌನ್ ಕಾರಣದಿಂದ ವಾಹಿನಿಗಳಿಗೆ ನಷ್ಟ ಉಂಟಾದ ಕಾರಣ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸಲಾಯ್ತು. ಆಗ ಧಾರಾವಾಹಿಯ ಅಭಿಮಾನಿಗಳಿಗೆ ಬೇಸರವಾಗಿದ್ದಂತೂ ನಿಜ. ಬೇರೆ ಯಾವ ವಾಹಿನಿಯಲ್ಲಾದರೂ ನಿಮ್ಮ ಧಾರಾವಾಹಿಯನ್ನು ಮುಂದುವರೆಸಿ ಎಂದು ಮನವಿ ಮಾಡಿದ್ದರು. ಅಷ್ಟರ ಮಟ್ಟಿಗೆ ಆ ಧಾರಾವಾಹಿ ವೀಕ್ಷಕರನ್ನು ಸೆಳೆದಿದ್ದು. ಆದರೆ ವೀಕ್ಷಕರ ಆಸೆ ನೆರವೇರಲಿಲ್ಲ. ಇದೀಗ ಆ ಬೇಸರ ನಿವಾರಿಸಲು ಟಿ.ಎನ್. ಸೀತಾರಾಮ್ ಹೊಸ ಧಾರಾವಾಹಿಯೊಂದಿಗೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಇದು ನಿಜವಾಗಿ ಟಿ.ಎನ್. ಸೀತಾರಾಮ್ ಆದಷ್ಟು ಬೇಗ ಹೊಸ ಧಾರಾವಾಹಿಯ ಬಗ್ಗೆ ಅನೌನ್ಸ್ ಮಾಡಿದರೆ 'ಮಗಳು ಜಾನಕಿ'ಯ ಅನಿರೀಕ್ಷಿತ ಮುಕ್ತಾಯದಿಂದ ಬೇಸರಗೊಂಡಿರುವ ಅಭಿಮಾನಿಗಳಿಗೆ ಖುಷಿಯಾಗುವುದರಲ್ಲಿ ನೋ ಡೌಟ್.

ABOUT THE AUTHOR

...view details