ಕಿರುತೆರೆ ನಟಿ ದಿಶಾ ಮದನ್ ಗಂಡುಮಗುವಿನ ತಾಯಿಯಾಗಿದ್ದಾರೆ. ಮೊನ್ನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ದಿಶಾ ಮದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ದಿಶಾ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ಟಿಕ್ಟಾಕ್ ಸ್ಟಾರ್ ದಿಶಾ ಮದನ್ - hate you romeo
ಇತ್ತೀಚೆಗೆ ಬೇಬಿ ಶವರ್ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದ ಟಿಕ್ಟಾಕ್ ಸ್ಟಾರ್ ದಿಶಾ ಮದನ್ ಮೊನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಷೇರ್ ಮಾಡಿಕೊಂಡಿರುವ ದಿಶಾ, ಮಗುವಿಗೆ ಶಶಾಂಕ್ ವಾಸುಕಿ ಗೋಪಾಲ್ ಎಂದು ಹೆಸರಿಟ್ಟಿದ್ದಾರೆ.

ಇತ್ತೀಚೆಗೆ ದಿಶಾ ಮದನ್ ಅವರ ಬೇಬಿ ಶವರ್ ಫೋಟೋಶೂಟ್ ವೈರಲ್ ಆಗಿತ್ತು. ದಿಶಾ ಟಿಕ್ಟಾಕ್ ಸ್ಟಾರ್ ಎಂದೇ ಹೆಸರಾದವರು. ಟಿಕ್ಟಾಕ್ ಮೂಲಕವೇ ಸುಮಾರು 3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ದಿಶಾ. ಅವರ ಬಬ್ಲಿ ಲುಕ್, ಹೇರ್ಸ್ಟೈಲ್ ಹಾಗೂ ಫ್ಯಾಶನ್ಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. 'ಕುಲವಧು' ಧಾರಾವಾಹಿ ನಂತರ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಕೂಡಾ ಅವರು ಭಾಗವಹಿಸಿದ್ದರು. ಶಿವರಾಜ್ಕುಮಾರ್ ಹಾಗೂ ಸಕತ್ ಸ್ಟುಡಿಯೋ ಸಹಯೋಗದಲ್ಲಿ ನಿರ್ಮಾಣವಾದ 'ಹೇಟ್ ಯು ರೋಮಿಯೋ' ವೆಬ್ ಸೀರಿಸ್ನಲ್ಲಿ ಕೂಡಾ ದಿಶಾ ಅಭಿನಯಿಸಿದ್ದರು. ಇದು ಅಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಶಶಾಂಕ್ ವಾಸುಕಿ ಗೋಪಾಲ್ ಅವರನ್ನು ವಿವಾಹವಾಗಿರುವ ದಿಶಾ ತಮ್ಮ ಮಗುವಿಗೆ ವಿಹಾನ್ ಶಶಾಂಕ್ ವಾಸುಕಿ ಎಂದು ಹೆಸರಿಟ್ಟಿದ್ದಾರೆ.