ಕರ್ನಾಟಕ

karnataka

ETV Bharat / sitara

'ಮಹಾನಾಯಕ' ಧಾರಾವಾಹಿ ಮೂಲಕ ಕೋಟ್ಯಂತರ ಹೃದಯ ಗೆದ್ದ ಬಾಲ ಪ್ರತಿಭೆ - Mahanayaka serial fame Anurag

ಡ್ರಾಮಾ ಜ್ಯೂನಿಯರ್ಸ್, ಮಹಾನಾಯಕ ಧಾರಾವಾಹಿ ಮೂಲಕ ವೀಕ್ಷಕರಿಗೆ ಪರಿಚಯವಾದ ಪುಟ್ಟ ಪ್ರತಿಭೆ ಅನುರಾಗ್ ಈಗ ಸಿನಿಮಾದಲ್ಲೂ ಮಿಂಚಲು ರೆಡಿಯಾಗಿದ್ದಾರೆ. 'ಫ್ಯಾಂಟಸಿ' ಚಿತ್ರದಲ್ಲಿ ಅನುರಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಮಹಾನಾಯಕ' ಧಾರಾವಾಹಿಯಲ್ಲಿ ಡಾ. ಬಿ.ಆರ್​​. ಅಂಬೇಡ್ಕರ್ ಬಾಲ್ಯದ ಪಾತ್ರಕ್ಕೆ ಧ್ವನಿ ನೀಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾನೆ.

Mahanayaka serial fame Anurag
ಅನುರಾಗ್

By

Published : Nov 13, 2020, 1:38 PM IST

ಮೊದಲೆಲ್ಲಾ ದೂರದರ್ಶನ ಬಿಟ್ಟರೆ ಖಾಸಗಿ ವಾಹಿನಿಗಳು ಇರಲಿಲ್ಲ. ಆದ್ದರಿಂದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುತ್ತಿರಲಿಲ್ಲ. ಈಗ ಸೋಷಿಯಲ್ ಮೀಡಿಯಾ, ಖಾಸಗಿ ವಾಹಿನಿಗಳು ಬೇಕಾದಷ್ಟಿವೆ. ಎಲೆಮರೆ ಕಾಯಿಯಂತೆ ಇರುವವರು, ಅದರಲ್ಲೂ ಬಾಲನಟರು ತಮ್ಮ ಪ್ರತಿಭೆಗಳನ್ನು ತೋರಿಸಲು ಅನೇಕ ರಿಯಾಲಿಟಿ ಶೋಗಳು ಸಹಾಯಕವಾಗಿವೆ.

ಬಾಲನಟ ಅನುರಾಗ್

ಈ ರಿಯಾಲಿಟಿ ಶೋಗಳ ಮೂಲಕವೇ ಎಷ್ಟೋ ಪ್ರತಿಭೆಗಳು ವೀಕ್ಷಕರಿಗೆ ಪರಿಚಯವಾಗಿದ್ದಾರೆ. ಜೀ ವಾಹಿನಿಯ ಜನಪ್ರಿಯ ಡ್ರಾಮಾ ಜ್ಯೂನಿಯರ್ ಶೋ ಮೂಲಕ ಕನ್ನಡಿಗರ ಮನ ಗೆದ್ದ ಪ್ರತಿಭೆಯೊಂದು ಈಗ ಕನ್ನಡ ಚಿತ್ರರಂಗದಲ್ಲಿ ಕೂಡಾ ಮಿಂಚಲು ಹೊರಟಿದ್ದಾನೆ. ಯಾರು ಆ ಬಾಲ ನಟ ಅಂತೀರಾ...? ಪ್ರತಿ ಎಪಿಸೋಡ್​​​ನಲ್ಲೂ ವಿವಿಧ ರೀತಿಯ ವೇಷ ಭೂಷಣ ತೊಟ್ಟು, ಪಂಚಿಂಗ್ ಡೈಲಾಗ್​​​ಗಳಿಂದಲೇ ಚಪ್ಪಾಳೆ ಗಿಟ್ಟಿಸಿದ ಪುಟಾಣಿ ಅನುರಾಗ್.

ಡ್ರಾಮಾ ಜ್ಯೂನಿಯರ್ಸ್​ ಮೂಲಕ ರಾಜ್ಯದ ಜನರಿಗೆ ಪರಿಚಯವಾದ ಪುಟಾಣಿ

ಪಟ ಪಟ ಅಂತಾ ಮಾತನಾಡುವ ಅನುರಾಗ್, ಭವಿಷ್ಯದಲ್ಲಿ, ಹೀರೋ ಆಗುವ ಎಲ್ಲಾ ಲಕ್ಷಣಗಳು ಇವೆ. ಸದ್ಯ ಸೈಕಾಲಜಿಕಲ್ ಥ್ರಿಲ್ಲರ್ 'ಫ್ಯಾಂಟಸಿ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅನುರಾಗ್ ನಟಿಸುತ್ತಿದ್ದಾರೆ. ಡ್ರಾಮಾ ಜ್ಯೂನಿಯರ್ ಶೋ ಮುಗಿಸಿದಾಗ ಅನುರಾಗ್​​​​ಗೆ ಮೊದಲು ಅವಕಾಶ ದೊರೆತದ್ದು, ಮಹಾನಾಯಕ ಡಾ. ಬಿ.ಆರ್​​. ಅಂಬೇಡ್ಕರ್ ಧಾರಾವಾಹಿಯಲ್ಲಿ. ಈ ಧಾರಾವಾಹಿಯಲ್ಲಿ ಅನುರಾಗ್ ನಟಿಸಿಲ್ಲ. ಆದರೆ ಪುಟ್ಟ ಭೀಮರಾವ್ ಪಾತ್ರಕ್ಕೆ ಅನುರಾಗ್ ಧ್ವನಿ ನೀಡಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾನೆ.

ಆ್ಯಕ್ಟಿಂಗ್​​​ನಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಬಾಲ ಪ್ರತಿಭೆ

ಅನುರಾಗ್​​ಗೆ ಈ 'ಮಹಾನಾಯಕ' ಧಾರಾವಾಹಿ ಬಹಳ ಸ್ಫೂರ್ತಿ ನೀಡಿದೆಯಂತೆ. ಈ ಧಾರಾವಾಹಿಯಲ್ಲಿ ಪುಟ್ಟ ಭೀಮರಾವ್ ತಮ್ಮ ಕುಟುಂಬದವರ ಬಗ್ಗೆ ತೋರಿಸುವ ಕಾಳಜಿ, ಊರಿನವರಿಗೆ ಸಹಾಯ ಮಾಡುವ ಗುಣ ಅನುರಾಗ್​​​ಗೆ ಬಹಳ ಇಷ್ಟವಾಯ್ತಂತೆ. ಅವರು ಅಷ್ಟು ಓದಿದಕ್ಕೆ ನಮ್ಮ ದೇಶದ ಸಂವಿಧಾನ ರಚಿಸಿದರು ಈ ಸೀರಿಯಲ್ ನೋಡಿ ನಾನೂ ಕೂಡಾ ಸಾಧನೆ ಮಾಡಬೇಕೆಂಬ ಛಲ ಹುಟ್ಟಿದೆ ಎನ್ನುತ್ತಾನೆ ಈ ಪುಟಾಣಿ.

'ಮಹಾನಾಯಕ' ಧಾರಾವಾಹಿಯ ಅಂಬೇಡ್ಕರ್ ಬಾಲ್ಯದ ಪಾತ್ರಕ್ಕೆ ಧ್ವನಿ ನೀಡಿರುವ ಅನುರಾಗ್

ಈ ಸೀರಿಯಲ್​​​ಗೆ ಡಬ್ಬಿಂಗ್ ಮಾಡುವಾಗ ಅನುರಾಗ್​​​ಗೆ ಅಳು ಬರುತ್ತಿತ್ತಂತೆ. ಅದೇ ರೀತಿ ಖುಷಿ ಕೂಡಾ ಆಗುತ್ತಿತ್ತಂತೆ. ಜನರಿಗೆ ನನ್ನ ಧ್ವನಿ ಇಷ್ಟವಾಗುತ್ತದೆ ಎಂದುಕೊಂಡಿರಲಿಲ್ಲ. ಈ ಧಾರಾವಾಹಿ ಮೂಲಕ ನನಗೆ ಪ್ರಶಸ್ತಿ ಬಂದಾಗಿನಿಂದ ಎಲ್ಲಿ ಹೋದರೂ ನನ್ನನ್ನು ಗುರುತಿಸುತ್ತಾರೆ. ಈ ಧಾರಾವಾಹಿಗೆ ಧ್ವನಿ ನೀಡುತ್ತಿರುವುದಕ್ಕೆ ನನಗೆ ಬಹಳ ಖುಷಿ ಇದೆ. ತನ್ನ ತಂದೆ ಸಂತೋಷ್. ಬಿ ಪಾಟೀಲ್ ಹಾಗೂ ತಾಯಿ ಕಲಾವತಿ ನನಗೆ ಬಹಳ ಪ್ರೋತ್ಸಾಹ ನೀಡುತ್ತಾರೆ ಎಂದು ಖುಷಿಯಿಂದ ಹೇಳುತ್ತಾನೆ ಈ ಬಾಲನಟ.

ಅನುರಾಗ್ 'ಫ್ಯಾಂಟಸಿ' ಸಿನಿಮಾದಲ್ಲಿ ನಟಿಸುತ್ತಿದ್ದಾನೆ

ಆ್ಯಕ್ಟಿಂಗ್ ಜೊತೆಗೆ ಓದಿನಲ್ಲಿ ಕೂಡಾ ಮುಂದಿರುವ ಅನುರಾಗ್​​​ಗೆ ಆನ್​​ಲೈನ್ ಕ್ಲಾಸ್ ಇರುವುದರಿಂದ ಓದಲು ತೊಂದರೆ ಆಗುತ್ತಿಲ್ಲವಂತೆ. ಶಿಕ್ಷಕರು ಹಾಗೂ ಸ್ನೇಹಿತರು ಕೂಡಾ ನನಗೆ ಬೆಂಬಲ ನೀಡುತ್ತಾರೆ ಎಂದು ಖುಷಿಯಿಂದ ಹೇಳುತ್ತಾನೆ ಈ ಮುದ್ದು ಹುಡುಗ. ಯಶ್, ಪುನೀತ್​ ರಾಜ್​​ಕುಮಾರ್, ಶಿವರಾಜ್​ಕುಮಾರ್, ರವಿಚಂದ್ರನ್​​ ಅವರೊಂದಿಗೆ ನಟಿಸಬೇಕೆಂಬುದು ಅನುರಾಗ್ ಆಸೆಯಂತೆ.

ಯಶ್, ಪುನೀತ್, ಶಿವಣ್ಣ, ರವಿಚಂದ್ರನ್ ಜೊತೆ ನಟಿಸುವ ಆಸೆ ಹೊಂದಿರುವ ಅನುರಾಗ್

ಇಷ್ಟು ಚಿಕ್ಕ ವಯಸ್ಸಿಗೆ ಕನ್ನಡಿಗರ ಪ್ರೀತಿ ಸಂಪಾದಿಸಿ ಭವಿಷ್ಯದಲ್ಲಿ ಇನ್ನೂ ಸಾಧನೆ ಮಾಡಬೇಕೆಂದು ಆಸೆ ಹೊತ್ತಿರುವ ಈ ಪುಣಾಣಿ ಕನಸು ನನಸಾಗಲಿ ಎಂದು ಹಾರೈಸೋಣ.

'ಮಹಾನಾಯಕ' ಧಾರಾವಾಹಿಗಾಗಿ ಪ್ರಶಸ್ತಿ ಗೆದ್ದ ಸಾಧಕ

ABOUT THE AUTHOR

...view details