ಕಲರ್ಸ್ ಕನ್ನಡದ ಖ್ಯಾತ ಕಾರ್ಯಕ್ರಮ ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್ ಆಗಸ್ಟ್ 29 ರಿಂದ ಮತ್ತೆ ಆರಂಭವಾಗುತ್ತಿರುವುದು ತಿಳಿದ ವಿಚಾರ. ವಾರಾಂತ್ಯದಲ್ಲಿ ವೀಕ್ಷಕರನ್ನು ನಕ್ಕು ನಗಿಸಲು ಸೃಜನ್ ಹಾಗೂ ತಂಡ ಮತ್ತೆ ಸಿದ್ಧವಾಗಿದೆ.
ಈ ಬಾರಿಯ ಮಜಾ ಟಾಕೀಸ್ನಲ್ಲಿ ಕುರಿ ಪ್ರತಾಪ್ ಕೂಡಾ ಇರಲಿದ್ದಾರೆ. ಕಳೆದ ಸೀಸನ್ಗಳಲ್ಲೂ ನವಿರಾದ ಹಾಸ್ಯದ ಮೂಲಕ ವೀಕ್ಷಕರ ಮನ ಸೆಳೆದಿರುವ ಸೃಜನ್ ಲೋಕೇಶ್ ಹಾಗೂ ತಂಡ ಇದೀಗ ಮತ್ತೆ ಜನರ ಮುಂದೆ ಬರುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. 'ಮಜಾ ಟಾಕೀಸ್ ಸೀಸನ್ 3 ಆರಂಭವಾಗುತ್ತಿರುವುದಕ್ಕೆ ನಾನು ವೈಯಕ್ತಿಕವಾಗಿ ತುಂಬಾ ಉತ್ಸುಕನಾಗಿದ್ದೇನೆ. ಲಾಕ್ ಡೌನ್ನಿಂದಾಗಿ ಕ್ಯಾಮರಾ ಮಿಸ್ ಮಾಡಿಕೊಂಡಿದ್ದೆ. ಸಣ್ಣ ಗ್ಯಾಪ್ ನಂತರ ಮತ್ತೆ ಸೆಟ್ಗೆ ತೆರಳಲು ತುಂಬಾ ಥ್ರಿಲ್ ಆಗಿದ್ದೇನೆ. ಕೊರೊನಾ ಕಿರಿಕಿರಿಯಿಂದ ಬೇಸತ್ತ ವೀಕ್ಷಕರಿಗೆ ಮಜಾ ಟಾಕೀಸ್ ಹೊಸ ಸೀಸನ್ ಪಕ್ಕಾ ಮನರಂಜನೆ ನೀಡಲಿದೆ' ಎಂದು ಸೃಜನ್ ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.