ಕರ್ನಾಟಕ

karnataka

ETV Bharat / sitara

2ನೇ ವಾರ ಬಿಗ್ ಬಾಸ್ ಮನೆಯಿಂದ ನಿರ್ಮಲಾ ಚೆನ್ನಪ್ಪ ಔಟ್​ - ಬಿಗ್ ಬಾಸ್ ಕನ್ನಡ ಸೀಸನ್‌ 8 ರಿಯಾಲಿಟಿ ಶೋ

ಬಿಗ್ ಬಾಸ್ ಸೀಸನ್‌ 8ರ ಎರಡನೇ ವಾರದಲ್ಲಿ ನಿರೀಕ್ಷೆಯಂತೆ ನಿರ್ಮಲಾ ಚೆನ್ನಪ್ಪ ಅವರು ಮನೆಯಿಂದ ಹೊರಬಂದಿದ್ದಾರೆ.

ನಿರ್ಮಲಾ ಚೆನ್ನಪ್ಪ
ನಿರ್ಮಲಾ ಚೆನ್ನಪ್ಪ

By

Published : Mar 15, 2021, 7:13 AM IST

ಬಿಗ್ ಬಾಸ್ ಕನ್ನಡ ಸೀಸನ್‌ 8ರ ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಧನುಶ್ರೀ ಎಲಿಮಿನೇಟ್ ಆದರೆ, ಎರಡನೇ ವಾರ ಮನೆಯಿಂದ ನಿರ್ಮಲಾ ಚೆನ್ನಪ್ಪ ಹೊರಬಂದಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು

ಎರಡನೇ ವಾರದಲ್ಲಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ದಿವ್ಯಾ ಸುರೇಶ್ಮ, ನಿರ್ಮಲಾ ಚೆನ್ನಪ್ಪ ಜೊತೆ ವಿಶ್ವನಾಥ್, ಗೀತಾ ಭಾರತಿ ಭಟ್, ಚಂದ್ರಕಲಾ ಮೋಹನ್ ಮತ್ತು ಪ್ರಶಾಂತ್ ಸಂಬರಗಿ ನಾಮಿನೇಟ್ ಆಗಿದ್ದರು. ಅಂತಿಮವಾಗಿ ನಿರ್ಮಲಾ ಅವರು ಎಲಿಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು

ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಶುಭಾ ಪೂಂಜಾ:

ಈ ವಾರ ಒಬ್ಬರು ಆಲ್​ರೌಂಡರ್​ ಸಿಕ್ಕಿದ್ರು ಅಂತ ನನಗನ್ನಿಸಿತು. ಆಟ ಆಡುವಾಗ ಮನಸ್ಸಿಟ್ಟು ಆಡಿದರು. ತಪ್ಪು ಮಾಡಿದಾಗ ಒಪ್ಪಿಕೊಂಡರು. ಬೇರೆಯವರು ತಪ್ಪು ಮಾಡಿದಾಗ ನೇರವಾಗಿ ಹೇಳಿದರು. ಚಿಕ್ಕ ಚಿಕ್ಕ ವಿಚಾರಗಳನ್ನು ದೊಡ್ಡದಾಗಿ ತೆಗೆದುಕೊಳ್ಳಲ್ಲ. ಅವರು ಬಹಳಾನೇ ಪ್ರಾಮಾಣಿಕ ವ್ಯಕ್ತಿ. ಅವರು ಬೇರೆ ಯಾರೂ ಅಲ್ಲ ನಮ್ಮ ಗಾಬರಿ ಗೋಪಾಲಮ್ಮ ಶುಭಾ ಪೂಂಜಾ ಎಂದ ಸುದೀಪ್​, ಈ ವಾರದ ಕಿಚ್ಚನ ಮೆಚ್ಚಿನ ಚಪ್ಪಾಳೆ ನೀಡಿದರು.

ABOUT THE AUTHOR

...view details