ಕರ್ನಾಟಕ

karnataka

ETV Bharat / sitara

ಲಾಕ್​ಡೌನ್​ ಹಿನ್ನೆಲೆ ಮತ್ತೆ ಮನೆ ಮನೆಗೆ ಬರ್ತಿದೆ ಮಹಾಕಾವ್ಯ 'ಮಹಾಭಾರತ' - Mahabharata Serial

ಲಾಕ್​ಡೌನ್​ ಹಿನ್ನೆಲೆ ಮಹಾಕಾವ್ಯ ಮಹಾಭಾರತ ಮತ್ತೆ ಮನೆ ಮನೆಗೆ ಬರ್ತಿದೆ. ವೀಕ್ಷಕರ ಒತ್ತಾಯದ ಮೇರೆಗೆ ಧಾರಾವಾಹಿ ಮೇ 15 ರಿಂದ ಶನಿವಾರ ಮತ್ತು ಭಾನುವಾರ ಸಂಜೆ 6:00 ರಿಂದ 8:30ರವರೆಗೆ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಲಿದೆ.

Mahabharata Serial will be aired again
ಲಾಕ್​ಡೌನ್​ ಹಿನ್ನೆಲೆ ಮತ್ತೆ ಮನೆ ಮನೆಗೆ ಬರ್ತಿದೆ ಮಹಾಕಾವ್ಯ 'ಮಹಾಭಾರತ'

By

Published : May 13, 2021, 9:26 PM IST

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್ ಆದ ನಂತರ ಧಾರಾವಾಹಿ, ಸಿನಿಮಾ ಮತ್ತು ರಿಯಾಲಿಟಿ ಶೋ ಶೂಟಿಂಗ್​ ಸ್ಥಗಿತಗೊಂಡಿವೆ. ಈ ಹಿನ್ನೆಲೆ ಕೆಲವು ವಾಹಿನಿಗಳಲ್ಲಿ ಹಳೆಯ ಜನಪ್ರಿಯ ಪೌರಾಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಲಾಗುತ್ತಿದೆ.

ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿಯೂ ‘ಮಹಾಭಾರತ’ ಧಾರಾವಾಹಿ ಪ್ರಸಾರವಾಗಿತ್ತು. ಆಗ ಧಾರಾವಾಹಿ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಮನೆ ಮನೆಗೆ ಬರ್ತಿದೆ ಮಹಾಕಾವ್ಯ 'ಮಹಾಭಾರತ'. ಇದೇ ಮೇ 15 ರಿಂದ ಶನಿವಾರ ಮತ್ತು ಭಾನುವಾರ ಸಂಜೆ 6:00 ರಿಂದ 8:30ರವರೆಗೆ ಸ್ಟಾರ್ ಸುವರ್ಣವಾಹಿನಿಯಲ್ಲಿ 'ಮಹಾಭಾರತ' ಧಾರಾವಾಹಿ ಪ್ರಸಾರವಾಗಲಿದೆ. ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಭಾರತ' ಧಾರಾವಾಹಿ ಈಗ ಕನ್ನಡದಲ್ಲಿ ಬರುತ್ತಿದ್ದು, ಈ ಧಾರಾವಾಹಿ ಬಹಳ ಹಳೆಯದಾದರೂ ಇಂದಿಗೂ ಅಪಾರ ಅಭಿಮಾನಿ ಬಳಗ ಹೊಂದಿದೆ.

ಬಿ.ಆರ್.ಚೋಪ್ರಾ ಮತ್ತು ರವಿ ಚೋಪ್ರಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಪ್ರತಿಯೊಂದು ದೃಶ್ಯವನ್ನು ಅತ್ಯದ್ಭುತವಾಗಿ ತೋರಿಸಿದ್ದಾರೆ. ಪ್ರತಿಯೊಂದು ದೃಶ್ಯಗಳು ಕಣ್ಣಿಗೆ ಕಟ್ಟಿದಂತಿವೆ. ಜನರು ಈ ಧಾರಾವಾಹಿಯನ್ನು ನೋಡಿದಾಗ ಮಹಾಭಾರತ ಸಂಭವಿಸಿದಾಗ ಇದೇ ರೀತಿ ನಡೆದಿರಬೇಕು ಎಂದು ಭಾವಿಸುತ್ತಾರೆ. ಧಾರಾವಾಹಿಯಲ್ಲಿ ಪ್ರತಿಯೊಬ್ಬರ ಅಭಿನಯ ಮನೋಜ್ಞವಾಗಿದೆ. ದ್ರೌಪದಿಯ ದೃಶ್ಯವನ್ನು ಚಿತ್ರೀಕರಿಸುವಾಗ ಆ ಪಾತ್ರ ಮಾಡುತ್ತಿದ್ದ ರೂಪಾ ಗಂಗೂಲಿ ಪಾತ್ರದಲ್ಲಿ ಸಂಪೂರ್ಣವಾಗಿ ಮುಳುಗಿದ್ದರಂತೆ. ಆ ಪಾತ್ರವನ್ನು ನಿರ್ವಹಿಸುವಾಗ ಅವರು ನಿಜವಾಗಿ ಅತ್ತಿದ್ದರು ಎಂದು ಹೇಳಲಾಗುತ್ತದೆ. ಈ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರದಲ್ಲಿ ನಿತೀಶ್ ಭಾರದ್ವಾಜ್, ಅರ್ಜುನನ ಪಾತ್ರದಲ್ಲಿ ಅರ್ಜುನ್​, ಭೀಮನ ಪಾತ್ರದಲ್ಲಿ ಪ್ರವೀಣ್ ಕುಮಾರ್, ಕರ್ಣನ ಪಾತ್ರದಲ್ಲಿ ಪಂಕಜ್ ಧೀರ್, ಯುಧಿಷ್ಠರನ ಪಾತ್ರದಲ್ಲಿ ಗಜೇಂದ್ರ ಚೌಹಾಣ್​, ಧುರ್ಯೋಧನನ ಪಾತ್ರದಲ್ಲಿ ಪುನೀತ್ ಇಸ್ಸಾರ್, ಶಕುನಿ ಪಾತ್ರದಲ್ಲಿ ಗುಫಿ ಪೈಂತಾಲ್, ಧೃತರಾಷ್ಟ್ರನ ಪಾತ್ರದಲ್ಲಿ ಗಿರಿಜಾ ಶಂಕರ್, ದ್ರೋಣಾಚಾರ್ಯ ಪಾತ್ರದಲ್ಲಿ ಸುರೇಂದ್ರ ಪಾಲ್, ಅಭಿಮನ್ಯು ಪಾತ್ರವನ್ನು ಮಯೂರ್ ವರ್ಮಾ ನಿರ್ವಹಿಸಿದ್ದಾರೆ.

ಓದಿ:15 ಸಾವಿರ ಹಣ ನೀಡಿದ ಅಂಧ ಮಹಿಳೆ: ಶ್ರೀಮಂತ ಭಾರತೀಯಳು ಎಂದ ಸೋನು ಸೂದ್​

ABOUT THE AUTHOR

...view details