ಬಿಗ್‌ಬಾಸ್ ಸೀಸನ್ 8 ರ ಮೊದಲ ಎಲಿಮಿನೇಟರ್ ಆಗಿ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ.
ಮೊದಲ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದ ಧನುಶ್ರೀ ಮೊದಲು ಎಲಿಮಿನೇಟ್ ಆಗಿರುವುದು ವಿಪರ್ಯಾಸ. ಕಳೆದ ಒಂದುವಾರ ಬಿಗ್‌ಬಾಸ್ ಮನೆಯಲ್ಲಿ ಯಾವುದೇ ಪರ್ಫಾರ್ಮೆನ್ಸ್ ತೋರದ ಧನುಶ್ರೀ ಕಳಪೆ ಪ್ರದರ್ಶನ ತೋರಿದ್ದರು. ನಾಮಿನೇಷನ್ನಿಂದ ತಪ್ಪಿಸಿಕೊಳ್ಳಲು ಎರಡು ಬಾರಿ ಅವಕಾಶ ಸಿಕ್ಕರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಅವರ ಸೋಲನ್ನು ಮನೆಯ ಎಲ್ಲ ಸದಸ್ಯರೂ ಒಪ್ಪಿಕೊಂಡರು. ಎಲ್ಲರೂ ಒಕ್ಕೊರಲಿನಿಂದ ಧನುಶ್ರೀಗೆ 'ಕಳಪೆ' ಎಂಬ ಹಣೆಪಟ್ಟಿ ಕಟ್ಟಿದರು. ಪರಿಣಾಮವಾಗಿ ಅವರನ್ನು ಜೈಲಿಗೂ ಕಳಿಸಲಾಗಿತ್ತು.