ಟಾಲಿವುಡ್ನ ಬಾಲ ಕಲಾವಿದ ಗೋಕುಲ್ ಸಾಯಿ ಕೃಷ್ಣ ಮಹಾಮಾರಿ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾನೆ. ಕಳೆದ ಎರಡು ದಿನಗಳಿಂದ ಗೋಕುಲ್ ಸಾಯಿ ಕೃಷ್ಣ ತೀವ್ರ ಜ್ವರದಿಂದ ಬಳಲುತ್ತಿದ್ದನು. ಹೆಚ್ಚಿನ ಚಿಕಿತ್ಸೆಗಾಗಿ ಆತನ ಪೋಷಕರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ದಾರಿ ಮಧ್ಯೆಯೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಬಾಲ ಕಲಾವಿದನ ಬಲಿ ಪಡೆದ ಮಹಾಮಾರಿ ಡೆಂಘೀ! - ಬಾಲ ಕಲಾವಿದನ ಬಲಿ ಪಡೆದ ಡೆಂಗ್ಯೂ
ಎರಡು ದಿನಗಳಿಂದ ಮಹಾಮಾರಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲ ಕಲಾವಿದನೊಬ್ಬ ಅಸುನೀಗಿದ್ದಾನೆ. ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಗೋಕುಲ್ ಸಾಯಿ ಕೃಷ್ಣ ಹಲವಾರು ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾನೆ. ಹಾಸ್ಯ ಹಾಗೂ ಮಿಮಿಕ್ರಿ ಮೂಲಕ ಗಮನ ಸೆಳೆದಿದ್ದ ಗೋಕುಲ್ನನ್ನು ಜೂ. ಬಾಲಕೃಷ್ಣ ಎಂದು ಕರೆಯಲಾಗುತ್ತಿತ್ತು. ಚಿತ್ತೂರು ಜಿಲ್ಲೆಯ ಮದನಪಲ್ಲಿ ಪಟ್ಟಣದವನಾದ ಗೋಕುಲ್, ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದನು. ಡ್ರಾಮಾ ಜ್ಯೂನಿಯರ್ಸ್ ಮೂಲಕ ಹೆಚ್ಚು ಚಿರಪರಿಚಿತನಾಗಿದ್ದನು.
ಗೋಕುಲ್ನ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಟ ಬಾಲಕೃಷ್ಣ ಸೇರಿದಂತೆ ಟಾಲಿವುಡ್ನ ತಾರಾ ಬಳಗ ಸಂತಾಪ ಸೂಚಿಸಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಟ್ವೀಟ್ ಮಾಡುವ ಮೃತ ಬಾಲ ಕಲಾವಿದನ ತಂದೆ ತಾಯಿಗೆ ಸಾಂತ್ವನ ಹೇಳಿದ್ದಾರೆ. ಕಳೆದ ಎರಡು ತಿಂಗಳಿನಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಡೆಂಘೀ ಜ್ವರದಿಂದ ಅನೇಕ ಸಾವುನೋವುಗಳು ಸಂಭವಿಸಿದ ವರದಿಯಾಗಿದೆ. ಮಿತಿಮೀರಿ ಹರಡುತ್ತಿರುವ ಮಹಾಮಾರಿ ಡೆಂಗ್ಯೂ ಜ್ವರಕ್ಕೆ ಇಲ್ಲಿನ ಜನ ತತ್ತರಿಸಿ ಹೋಗಿದ್ದಾರೆ.