ಕರ್ನಾಟಕ

karnataka

ETV Bharat / sitara

ಲಾಕ್​ಡೌನ್​ ಮಧ್ಯೆ ಲಾಕ್​ ಆದ ತೆಲುಗು ಸ್ಟಾರ್​... ದಾಂಪತ್ಯಕ್ಕೆ ಕಾಲಿಟ್ಟ ನಿಖಿಲ್​​​! - ಪಲ್ಲಿವಿ ಶರ್ಮಾ

ಲಾಕ್​ಡೌನ್ ಮಧ್ಯೆ ತೆಲುಗು ನಟ ಸಿದ್ಧಾರ್ಥ್​ ಪ್ರೇಯಸಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ.

Telugu Actor Nikhil Siddhartha
Telugu Actor Nikhil Siddhartha

By

Published : May 14, 2020, 7:40 PM IST

ಹೈದರಾಬಾದ್​: ದೇಶಾದ್ಯಂತ ಲಾಕ್​ಡೌನ್​ 3.0 ಮುಂದುವರಿದಿದ್ದು, ಇದರ ಮಧ್ಯೆ ಸರಳವಾಗಿ ಕೆಲ ಸೆಲಿಬ್ರೆಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದು, ಇದೀಗ ತೆಲುಗು ನಟ ನಿಖಿಲ್​​ ಸಿದ್ಧಾರ್ಥ್​ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ದಾಂಪತ್ಯಕ್ಕೆ ಕಾಲಿಟ್ಟ ನಿಖಿಲ್ ಸಿದ್ಧಾರ್ಥ್​

ಟಾಲಿವುಡ್​ನ ಯಂಗ್​ ಹೀರೋ ಎಂದೇ ಗುರುತಿಸಿಕೊಂಡಿದ್ದ ನಿಖಿಲ್​ ಸಿದ್ಧಾರ್ಥ್​ ಹ್ಯಾಪಿಡೇಸ್​​ ಎಂಬ ಚಿತ್ರದ ಮೂಲಕ ಗುರುತಿಸಿಕೊಂಡಿದ್ದರು. ಭೀಮಾವರಂ ಮೂಲದ ಪಲ್ಲವಿ ವರ್ಮಾ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದು, ಹೈದರಾಬಾದ್‍ನ ಶಮೀರ್‌‍ಪೇಟೆಯಲ್ಲಿನ ಫಾರೆಸ್ಟ್ ರಿಡ್ಜ್ ವಿಲ್ಲಾದಲ್ಲಿ ಕಾರ್ಯಕ್ರಮ ನಡೆದಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ

ಹಿಂದೂ ಸಂಪ್ರದಾಯದಂತೆ ಗುರುಹಿರಿಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದ್‍ನಲ್ಲಿ ಫೆ. 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಹಿಂದೆ ಏಪ್ರಿಲ್ 16ರಂದು ನಿಖಿಲ್​- ಪಲ್ಲವಿ ಮದುವೆ ನಿಶ್ಚಯವಾಗಿತ್ತು. ಆದರೆ, ಲಾಕ್‍ಡೌನ್​ ಕಾರಣ ಮುಂದೂಡಿಕೆಯಾಗಿತ್ತು. ಇದೀಗ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಲಾಕ್​ಡೌನ್​ ಮಧ್ಯೆ ಲಾಕ್​ ಆದ ತೆಲುಗು ಸ್ಟಾರ್

ಲಾಕ್​ಡೌನ್​ ನಿಯಮ ಪಾಲನೆ ಮಾಡಿ ಸರಳವಾಗಿ ವಿವಾಹವಾಗಿದ್ದು, ಸೀಮಿತ ಬಂಧು-ಬಳಗ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಲಾಕ್​ಡೌನ್​ ಮಧ್ಯೆ ಲಾಕ್​ ಆದ ತೆಲುಗು ಸ್ಟಾರ್

ABOUT THE AUTHOR

...view details