ಕೊರೊನಾ ಸೋಂಕಿತರು ಹೆಚ್ಚಿರುವ ಆಸ್ಪತ್ರೆಗೆ 10 ಸಾವಿರ ಪಿಪಿಇ ಕಿಟ್: ಕಿರುತೆರೆ ನಟಿ ಶ್ವೇತಾ ಪ್ರಸಾದ್ರಿಂದ ಸಹಾಯ - Radha amana serial actress
ನಟನೆಯ ಮೂಲಕ ಕಿರುತೆರೆ ಪ್ರಿಯರ ಮನ ಕದ್ದಿರುವ ಶ್ವೇತಾ ಪ್ರಸಾದ್ ಇದೀಗ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
![ಕೊರೊನಾ ಸೋಂಕಿತರು ಹೆಚ್ಚಿರುವ ಆಸ್ಪತ್ರೆಗೆ 10 ಸಾವಿರ ಪಿಪಿಇ ಕಿಟ್: ಕಿರುತೆರೆ ನಟಿ ಶ್ವೇತಾ ಪ್ರಸಾದ್ರಿಂದ ಸಹಾಯ 10 ಸಾವಿರ ಪಿಪಿಇ ಕಿಟ್ ವಿತರಣೆಗೆ ಮುಂದಾದ ಕಿರುತೆರೆ ನಟಿ ಶ್ವೇತಾ ಪ್ರಸಾದ್](https://etvbharatimages.akamaized.net/etvbharat/prod-images/768-512-7052761-999-7052761-1588577250430.jpg)
ರಾಧಾ ರಮಣ ಧಾರಾವಾಹಿಯ ಆರಾಧನಾಳಾಗಿ ಕಿರುತೆರೆ ಲೋಕದಲ್ಲಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ಶ್ವೇತಾ ಪ್ರಸಾದ್ ಅವರು ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಪ್ರವಾಹ ಎದುರಾದಾಗ ಪತಿ ಪ್ರದೀಪ್ ಜತೆ ಸೇರಿ ಪ್ರವಾಹ ಪೀಡಿತ ಜನರಿಗೆ ಕೈಲಾದ ಸಹಾಯ ಮಾಡುವ ಮೂಲಕ ಸುದ್ದಿಯಲ್ಲಿದ್ದರು.
ಇದೀಗ ಲಾಕ್ ಡೌನ್ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಅನೇಕ ಮಂದಿ ಮುಂದೆ ಬಂದಿದ್ದಾರೆ. ಈ ಸಮಯದಲ್ಲಿ ಊಟ, ರೇಷನ್ ಅನ್ನು ನೀಡುವವರು ಕೊಂಚ ಸ್ಯಾನಿಟರಿ ನ್ಯಾಪ್ಕಿನ್ ನತ್ತ ಗಮನ ಹರಿಸಿ ಎಂದು ಶ್ವೇತಾ ಮನವಿ ಮಾಡಿದ್ದಾರೆ. ಜನೌಷಧಿ ಕೇಂದ್ರದವರು ಸ್ಯಾನಿಟರಿ ನ್ಯಾಪ್ಕಿನ್ ಅನ್ನು ವಿತರಿಸುತ್ತಾರೆ ನಿಜ, ಆದರೆ ಜನರಿಗೂ ನ್ಯಾಪ್ಕಿನ್ ಅಗತ್ಯವಿದೆ. ಊಟ, ರೇಷನ್ ನೀಡುವವರು ನ್ಯಾಪ್ಕಿನ್ ಕೂಡ ನೀಡಲು ಮುಂದಾಗಿ ಎಂದು ಹೇಳಿದ್ದಾರೆ ಶ್ವೇತಾ ಪ್ರಸಾದ್.