ಶನಿವಾರ, ಭಾನುವಾರ ಬಂತೆಂದರೆ ಸಾಕು ಸಂಗೀತಪ್ರಿಯರಿಗೆ ಹಬ್ಬ. ರಾತ್ರಿ 8ಕ್ಕೆ ಪ್ರಸಾರವಾಗುವ ಸರಿಗಮಪ ಲಿಟ್ಲ್ ಚಾಂಪ್ ಕಾರ್ಯಕ್ರಮದಲ್ಲಿ ಪುಟಾಣಿಗಳು ಹಾಡುವ ಹಾಡಿಗಾಗಿ ಎಲ್ಲರೂ ಕಾದು ಕುಳಿತಿರುತ್ತಾರೆ.
ಸರಿಗಮಪ ಶಾಲೆಯಲ್ಲಿ ಸಂಗೀತ ಮೇಷ್ಟ್ರು ಪಾಠಕ್ಕೆ ತಲೆದೂಗಿದ ವಿದ್ಯಾರ್ಥಿಗಳು - undefined
ಈ ಬಾರಿಯ ಸರಿಗಮಪ ಸಂಚಿಕೆ ವಿಶೇಷತೆಯಿಂದ ಕೂಡಿದೆ. ನಿರೂಪಕಿ ಅನುಶ್ರೀ, ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈ ಬಾರಿ ಶಾಲೆ ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಇನ್ನು ಈ ಬಾರಿಯ ಸಂಚಿಕೆ ವಿಶೇಷತೆಯಿಂದ ಕೂಡಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರುಬೀನಾ ತನ್ನ ಶಾಲೆಯ ಸಮವಸ್ತ್ರದಲ್ಲೇ ಹಾಡು ಹಾಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಅದೇ ಕಾನ್ಸೆಪ್ಟ್ ಇಟ್ಟುಕೊಂಡು ಕಾರ್ಯಕ್ರಮದಲ್ಲಿ ಎಲ್ಲರೂ ಯೂನಿಫಾರಂ ತೊಡುವಂತಾಗಿದೆ. 'ಬ್ಯಾಕ್ ಟು ಸ್ಕೂಲ್' ಎಂಬ ಕಾನ್ಸೆಪ್ಟ್ ಮೂಲಕ ವೀಕ್ಷಕರನ್ನು ರಂಜಿಸಲು ಸರಿಗಮಪ ತಂಡ ಸಿದ್ಧವಾಗಿದೆ. ಶಾಲಾ ದಿನಗಳನ್ನು ಮತ್ತೆ ನೆನಪಿಸುವ ಕಾರ್ಯಕ್ರಮ ಇದಾಗಿದ್ದು, ತಂಡದ ತೀರ್ಪುಗಾರರಾದ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ವಿಜಯ ಪ್ರಕಾಶ್, ಅನುಶ್ರೀ ಶಾಲೆಯ ಯೂನಿಫಾರಂ ತೊಟ್ಟಿದ್ದಾರೆ.
ಸಂಗೀತ ಮಾಂತ್ರಿಕ ಹಂಸಲೇಖ ಶಾಲೆಯ ಮೇಷ್ಟ್ರು ಆಗಿದ್ದಾರೆ. ಅನುಶ್ರೀ ಎರಡು ಜಡೆ ಹಾಕೊಂಡು ಸರ್ಕಾರಿ ಶಾಲೆಯ ಯೂನಿಫಾರಂ ಹಾಕಿದ್ದಾರೆ. ರಾಜೇಶ್ ಕೃಷ್ಣನ್ ಬಿಳಿ ಶರ್ಟ್, ಟೈ ಹಾಗೂ ನೀಲಿ ಬಣ್ಣದ ಶಾರ್ಟ್ಸ್ ಹಾಕಿದ್ದಾರೆ. ಅರ್ಜುನ್ ಜನ್ಯ ಅವರು ತಿಳಿ ನೀಲಿ ಶರ್ಟ್ ಹಾಗೂ ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇನ್ನು ವಿಜಯ್ ಪ್ರಕಾಶ್ ಕೂಡಾ ಬಿಳಿ ಶರ್ಟ್ ಹಾಗೂ ನೀಲಿ ಪ್ಯಾಂಟ್ ಹಾಕಿಕೊಂಡು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಕಾರ್ಯಕ್ರಮ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.