ಕರ್ನಾಟಕ

karnataka

ETV Bharat / sitara

ಬೈಕ್ ಸ್ಟಂಟ್​ ವೇಳೆ ಅವಘಡ...ನಟ ವಿಶಾಲ್​ ಕೈ-ಕಾಲಿಗೆ ಪೆಟ್ಟು - undefined

ಇತ್ತೀಚಿಗಷ್ಟೆ ಅನಿಷಾ ರೆಡ್ಡಿ ಜತೆ ಎಂಗೇಜ್​ಮ್ಮೆಂಟ್ ಮಾಡಿಕೊಂಡಿರುವ ವಿಶಾಲ್​, ಮತ್ತೇ ಶೂಟಿಂಗ್​ನಲ್ಲಿ ಬ್ಯೂಸಿಯಾಗಿದ್ದರು. ಇದೀಗ ಟರ್ಕಿಯಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಬೈಕ್​ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ.

ನಟ ವಿಶಾಲ್​ ಕೈ-ಕಾಲಿಗೆ ಪೆಟ್ಟು

By

Published : Mar 28, 2019, 2:17 PM IST

ಬೈಕ್​ ಮೇಲಿಂದ ಬಿದ್ದು ಕಾಲಿವುಡ್ ಸ್ಟಾರ್ ವಿಶಾಲ್​ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಈ ಅನಾಹುತ ನಡೆದಿದೆ.

ಸುಂದರ್​.ಸಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ವಿಶಾಲ್ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ ಟರ್ಕಿಯಲ್ಲಿ ನಡೆಯುತ್ತಿದೆ. ನಿನ್ನೆಯಷ್ಟೆ ಬೈಕ್​ ಸ್ಟಂಟ್​ನ ಕೆಲ ದೃಶ್ಯಗಳ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಅಚಾನಕ್ ಆಗಿ ವಿಶಾಲ್ ಓಡಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಕೆಳಗೆ ಬಿದ್ದಿರುವ ನಟನಿಗೆ ಎಡ ಭಾಗದ ಕೈ ಹಾಗೂ ಕಾಲಿಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ನಟ ವಿಶಾಲ್​ ಕೈ-ಕಾಲಿಗೆ ಪೆಟ್ಟು

50 ದಿನಗಳ ಕಾಲ ಟರ್ಕಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ. ಚಿತ್ರನಟಿ ತಮನ್ನಾ ಸೇರಿದಂತೆ ಚಿತ್ರತಂಡ ಅಲ್ಲಿಯೇ ಬೀಡು ಬಿಟ್ಟಿದೆ. ಸದ್ಯ ವಿಶಾಲ್ ವಿಶ್ರಾಂತಿ ಪಡೆಯಲಿದ್ದು, ಮುಂದಿನ ದಿನಗಳಲ್ಲಿ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

For All Latest Updates

TAGGED:

ABOUT THE AUTHOR

...view details