ಕರ್ನಾಟಕ

karnataka

ETV Bharat / sitara

ಮತ್ತೆ ಕಿರುತೆರೆಗೆ ಸೃಜನ್​​​​​...ಹೊಸ ಕಾರ್ಯಕ್ರಮದ ನಿರೂಪಣೆ ಮಾಡ್ತಿದ್ದಾರೆ ಟಾಕಿಂಗ್ ಸ್ಟಾರ್​​​​​​​​​​​​​​​​ - ಕಿರುತೆರೆಗೆ ವಾಪಸಾದ ಟಾಕಿಂಗ್ ಸ್ಟಾರ್

ಹೊಸ ರಿಯಾಲಿಟಿ ಶೋ ಮೂಲಕ ಕಿರುತೆರೆ ಲೋಕಕ್ಕೆ ಸೃಜನ್ ಮರಳಿ ಬರಲಿದ್ದು ಕಾರ್ಯಕ್ರಮದ ಪ್ರೋಮೋ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಒಂದು ಶೋ ಆರಂಭವಾಗಲಿದ್ದು ಅದರ ನಿರೂಪಕರಾಗಿ ಸೃಜನ್ ಲೋಕೇಶ್ ಕಾಣಿಸಿಕೊಳ್ಳಲಿದ್ದಾರೆ.

Srujan
ಸೃಜನ್

By

Published : Feb 3, 2020, 1:57 PM IST

ಟಾಕಿಂಗ್ ಸ್ಟಾರ್ ಎಂದೇ ಜನಪ್ರಿಯರಾಗಿರುವ ಸೃಜನ್ ಲೋಕೇಶ್ ಇದೀಗ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್​ ಕಾರ್ಯಕ್ರಮದ ರೂವಾರಿ, ನಿರೂಪಕ ಸೃಜನ್ ಲೋಕೇಶ್ 'ಮಜಾ ಟಾಕೀಸ್' ಮುಗಿದ ಮೇಲೆ ಕಿರುತೆರೆಯಿಂದ ದೂರವಿದ್ದು ಸಿನಿಮಾಗಳಲ್ಲಿ ಬ್ಯುಸಿಯಿದ್ದರು. ಇದೀಗ ಮತ್ತೆ ಸೃಜನ್ ಕಿರುತೆರೆಗೆ ವಾಪಸಾಗುತ್ತಿದ್ದಾರೆ.

ಬಾಲನಟನಾಗಿ ಬಣ್ಣದ ಪಯಣ ಆರಂಭಿಸಿದ ಸೃಜನ್

ಜೀ ಕನ್ನಡ ವಾಹಿನಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಒಂದು ಶೋ ಆರಂಭವಾಗಲಿದ್ದು ಅದರ ನಿರೂಪಕರಾಗಿ ಸೃಜನ್ ಲೋಕೇಶ್ ಕಾಣಿಸಿಕೊಳ್ಳಲಿದ್ದಾರೆ. ಬಾಲನಟ, ನಾಯಕ, ದೂರದರ್ಶನ ನಿರೂಪಕ, ರೆಡಿಯೋ ನಿರೂಪಕ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ 'ಭುಜಂಗಯ್ಯನ ದಶಾವತಾರ' ಮತ್ತು 'ವೀರಪ್ಪನ್' ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ. 'ನೀಲ ಮೇಘ ಶ್ಯಾಮ' ಚಿತ್ರದ ಮೂಲಕ ರಾಧಿಕಾ ಜೊತೆ ನಾಯಕನಾಗಿ ಕೂಡಾ ನಟಿಸಿದ ಸೃಜನ್​​​, ನಂತರ ಪೊರ್ಕಿ, ನವಗ್ರಹ, ಚಿಂಗಾರಿ, ಎದೆಗಾರಿಕೆ, ಅಂದರ್ ಬಾಹರ್, ಸ್ನೇಹಿತರು, ಪರಮ ಶಿವ, ಲವ್ ಯೂ ಆಲಿಯಾ, ಜಗ್ಗುದಾದಾ, ಚಕ್ರವರ್ತಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಹೊಸ ರಿಯಾಲಿಟಿ ಶೋ ನಡೆಸಿಕೊಡುತ್ತಿರುವ ಸೃಜನ್

ಸೃಜನ್ ಅವರಿಗೆ ಹೆಸರು ತಂದುಕೊಟ್ಟಿದ್ದು 'ಆನೆ ಪಟಾಕಿ' ಚಿತ್ರದ ಬೀರೇಗೌಡ ಪಾತ್ರ. 'ಟಿಪಿಕಲ್ ಕೈಲಾಸ' ಎಂಬ ಸಿನಿಮಾದಲ್ಲಿ ಕೈಲಾಸ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ ಸೃಜನ್ ಲೋಕೇಶ್, ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದಾರೆ. ಬಿಗ್​​​​​​​​​​​​​​ಬಾಸ್ ಸೀಸನ್ 2 ರ ಸ್ಪರ್ಧಿಯಾಗಿ ಫೈನಲ್​​​​ವರೆಗೂ ತಲುಪಿದ ಸೃಜನ್, 2013 ರಲ್ಲಿ 'ಲೋಕೇಶ್ ಪ್ರೊಡಕ್ಷನ್ಸ್' ಆರಂಭಿಸಿದರು. ಚಾಲೆಂಜ್, ಚೋಟಾ ಚಾಂಪಿಯನ್ಸ್, ಮಮ್ಮಿ ನಂ 1, ಕಾಸಿಗೆ ಟಾಸು ಎಂಬ ರಿಯಾಲಿಟಿ ಶೋಗಳನ್ನು ಕೂಡಾ ತಮ್ಮದೇ ಪ್ರೊಡಕ್ಷನ್ಸ್ ಅಡಿ ನಿರ್ಮಿಸಿದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ' ಧಾರಾವಾಹಿಯನ್ನು ನಿರ್ಮಿಸಿರುವ ಸೃಜನ್ ಲೋಕೇಶ್ ನಿರೂಪಕರಾಗಿಯೂ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.

ಹೊಸ ಕಾರ್ಯಕ್ರಮದ ಪ್ರೋಮೋ (ವಿಡಿಯೋ ಕೃಪೆ: ಜೀ ಕನ್ನಡ)

ಟಾಕಿಂಗ್ ಸ್ಟಾರ್ ಅಲಿಯಾಸ್ ಮಾತಿನ ಮಲ್ಲ ಎಂದೇ ಹೆಸರು ಗಳಿಸಿರುವ ಸೃಜನ್, ಮಜಾ ವಿತ್ ಸೃಜಾ, ಸೈ, ಕಿಚನ್ ಕಿಲಾಡಿಗಳು, ಸ್ಟಾರ್ ಸಿಂಗರ್ ಗ್ರ್ಯಾಂಡ್ ಫಿನಾಲೆ, ಸುವರ್ಣ ಫಿಲಂ ಅವಾರ್ಡ್, ಸೈ 2, ಕಾಸ್​​​ಗೆ ಟಾಸ್, ಡ್ಯಾಡಿ ನಂ 1, ಚೋಟಾ ಚಾಂಪಿಯನ್ ಸೀಸನ್ 1, 2 ಹಾಗೂ ಮಜಾ ಟಾಕೀಸ್ ನಿರೂಪಕರಾಗಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದಾರೆ. ಇದೀಗ ಹೊಸ ರಿಯಾಲಿಟಿ ಶೋ ಮೂಲಕ ಕಿರುತೆರೆ ಲೋಕಕ್ಕೆ ಸೃಜನ್ ಮರಳಿ ಬರಲಿದ್ದು ಕಾರ್ಯಕ್ರಮದ ಪ್ರೋಮೋ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಸೃಜನ್ ಅಭಿಮಾನಿಗಳು ಕೂಡಾ ಮತ್ತೆ ತಮ್ಮ ನೆಚ್ಚಿನ ನಟನ ನಿರೂಪಣೆಯನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದಲ್ಲಿ ಟಾಕಿಂಗ್ ಸ್ಟಾರ್

ABOUT THE AUTHOR

...view details