ಕರ್ನಾಟಕ

karnataka

ETV Bharat / sitara

ಆಟಕ್ಕೆ ಈಗ ಖದರ್‌ ಬಂತು.. ಬಿಗ್​ಬಾಸ್ ಮನೆಯಲ್ಲಿ ರಾಜು ತಾಳಿಕೋಟಿ ಮೇಲೆ ಬುಸ್​​ಗುಟ್ಟಿದ 'ನಾಗಿಣಿ'! - ದೀಪಿಕಾ ದಾಸ್​​​ ಹಾಗೂ ರಾಜು ತಾಳಿಕೋಟಿ ನಡುವೆ ಜಗಳ

ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಸ್ಪರ್ಧಿಗಳು ಲಿವಿಂಗ್ ಏರಿಯಾದಿಂದ ಡೈನಿಂಗ್ ಹಾಲ್​​ಗೆ ಹೋಗುವ ಸಂದರ್ಭದಲ್ಲಿ ರಾಜು ತಾಳಿಕೋಟೆ ದೀಪಿಕಾ ಅವರ ಕೈ ಮುಟ್ಟಿ ಮಾತನಾಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ದೀಪಿಕಾ ದಾಸ್ ರಾಜು ತಾಳಿಕೋಟಿಗೆ ಬೈದಿದ್ದಾರೆ.

ರಾಜು ತಾಳಿಕೋಟಿ, ದೀಪಿಕಾ ದಾಸ್

By

Published : Oct 16, 2019, 7:41 PM IST

ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಿಗ್​​​ಬಾಸ್ ಸೀಸನ್ 7 ಆರಂಭವಾಗಿ ಕೇವಲ 2 ದಿನಗಳು ಕಳೆದಿವೆ. ಈ ಬಾರಿ 18 ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದು ಮೊದಲ ದಿನವೇ ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೊರ ಹೋಗಿದ್ದಾರೆ. ಅಲ್ಲದೆ ಮೊದಲ ದಿನವೇ 6 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಈಗಾಗಲೇ ಮನೆಯಲ್ಲಿ ಸ್ಪರ್ಧಿಗಳ ನಡುವೆ ಹಾವು ಮುಂಗುಸಿ ಜಗಳ ಆರಂಭವಾಗಿದೆ. ನಿನ್ನೆ ನಾಗಿಣಿ ಖ್ಯಾತಿಯ ದೀಪಿಕಾದಾಸ್, ಹಾಸ್ಯನಟ ರಾಜು ತಾಳಿಕೋಟಿ ಮೇಲೆ ಬುಸ್​ಗುಟ್ಟಿದ್ದಾರೆ. ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಸ್ಪರ್ಧಿಗಳು ಲಿವಿಂಗ್ ಏರಿಯಾದಿಂದ ಡೈನಿಂಗ್ ಹಾಲ್​​ಗೆ ಹೋಗುವ ಸಂದರ್ಭದಲ್ಲಿ ರಾಜು ತಾಳಿಕೋಟೆ ದೀಪಿಕಾ ಅವರ ಕೈಮುಟ್ಟಿ ಮಾತನಾಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ದೀಪಿಕಾ ದಾಸ್​, ನನ್ನ ಕೈ ಮುಟ್ಟಿ ಮಾತನಾಡಬೇಡಿ ನನಗೆ ಕೋಪ ಬರುತ್ತೆ ಎಂದು ರಾಜು ತಾಳಿಕೋಟೆಗೆ ಬೈದಿದ್ದಾರೆ. ಒಟ್ಟಿನಲ್ಲಿ ಬಿಗ್​​ಬಾಸ್ ಮನೆಯಲ್ಲಿ ಎರಡೇ ದಿನಕ್ಕೆ ಹಾವು ಮುಂಗುಸಿ ಆಟ ಆರಂಭವಾಗಿದ್ದು, ದಿನಕಳೆದಂತೆ ಇದು ಎಲ್ಲಿ ಹೋಗಿ ಮುಟ್ಟುವುದೋ ಕಾದು ನೋಡಬೇಕು.

For All Latest Updates

TAGGED:

ABOUT THE AUTHOR

...view details