ಸೀರಿಯಲ್ ಮೂಲಕ ನಟನೆ ಪ್ರಾರಂಭಿಸಿ ಸಿನಿಲೋಕಕ್ಕೆ ಕಾಲಿಟ್ಟ ಚಂದನವನದ ಹಲವು ನಟಿಯರಲ್ಲಿ ಸ್ವಾತಿ ಶರ್ಮಾ ಕೂಡಾ ಒಬ್ಬರು. ಕೋಲಾರದ ಚಿಂತಾಮಣಿಯ ಸಂಪ್ರದಾಯಸ್ಥ ಮನೆತನದ ಈ ಹುಡುಗಿಗೆ ನಟಿ ಆಗುವ ಕನಸೇನೂ ಇರಲಿಲ್ಲ. ಸದಾ ಓದಿನಲ್ಲೇ ಇದ್ದ ಹುಡುಗಿ ಕಾಲೇಜಿನಲ್ಲಿ ನಡೆಯುವ ಫ್ಯಾಷನ್ ಶೋಗಳಲ್ಲಿ ಭಾಗಿಯಾಗುತ್ತಿದ್ದರು.
ಇಂತಿಪ್ಪ ಈ ಕೋಲಾರದ ಬೆಡಗಿ ನಟನಾ ಲೋಕಕ್ಕೆ ಕಾಲಿಟ್ಟಿದ್ದು ಆಕಸ್ಮಿಕ. ತನ್ನ ಸ್ನೇಹಿತೆ ಕಳುಹಿಸಿದ ಫೋಟೋಗಳಿಂದಾಗಿ ಅವರಿಗೆ ಆಡಿಷನ್ ಕರೆ ಬಂದಿತ್ತು. ಹೀಗೆ ಆಡಿಷನ್ ಕೊಟ್ಟು ಆಯ್ಕೆಯೂ ಆದರು. ತಂದೆ ತಾಯಿ ತುಂಬಾ ಯೋಚಿಸಿ ಒಪ್ಪಿಗೆ ಕೊಟ್ಟುಬಿಟ್ಟರು. ಹೀಗೆ ಓಂ ಶಕ್ತಿ ಓಂ ಶಾಂತಿ ಧಾರಾವಾಹಿ ಮೂಲಕ ಸ್ವಾತಿ ಬಣ್ಣದ ಜಗತ್ತಿಗೆ ಪ್ರವೇಶ ಮಾಡಿದರು.
ಸಿನಿಲೋಕಕ್ಕೆ ಕಾಲಿಟ್ಟ ಚಂದನವನದ ಹಲವು ನಟಿಯರಲ್ಲಿ ಸ್ವಾತಿ ಶರ್ಮಾ ಕೂಡಾ ಒಬ್ಬರು ಸದಾ ಓದಿನಲ್ಲೇ ಇದ್ದ ಹುಡುಗಿ ಕಾಲೇಜಿನಲ್ಲಿ ನಡೆಯುವ ಫ್ಯಾಷನ್ ಶೋಗಳಲ್ಲಿ ಭಾಗಿಯಾಗುತ್ತಿದ್ದರು ಈ ಕೋಲಾರದ ಬೆಡಗಿ ನಟನಾ ಲೋಕಕ್ಕೆ ಕಾಲಿಟ್ಟಿದ್ದು ಆಕಸ್ಮಿಕ ನಂತರ ಕಲರ್ಸ್ ಕನ್ನಡ ವಾಹಿನಿಯಿಂದ ಆಡಿಷನ್ನಲ್ಲಿ ಭಾಗವಹಿಸುವಂತೆ ಕರೆ ಬಂತು. ಅಟೆಂಡ್ ಮಾಡಿದ ಸ್ವಾತಿ ಆಯ್ಕೆಯಾಗಿದ್ದರು. ಮನೆದೇವ್ರು ಧಾರಾವಾಹಿಯಲ್ಲಿ ನಾಯಕನ ತಂಗಿ ಸಾನ್ವಿ ಪಾತ್ರದಲ್ಲಿ ನಟಿಸಿದರು. ಈ ಧಾರಾವಾಹಿ ನಂತರ ಹಿರಿತೆರೆಯತ್ತ ಮುಖ ಮಾಡಿದ ಸ್ವಾತಿ ಶರ್ಮ, ರಾಮರಾಜ್ಯ ಎನ್ನುವ ಮಕ್ಕಳ ಸಿನಿಮಾದಲ್ಲಿ ಉತ್ತಮ ಪಾತ್ರ ನಿರ್ವಹಿಸಿದರು.
ತನ್ನ ಸ್ನೇಹಿತೆ ಕಳುಹಿಸಿದ ಫೋಟೋಗಳಿಂದಾಗಿ ಅವರಿಗೆ ಆಡಿಷನ್ ಕರೆ ಬಂದಿತ್ತು ಓಂ ಶಕ್ತಿ ಓಂ ಶಾಂತಿ ಧಾರಾವಾಹಿ ಮೂಲಕ ಸ್ವಾತಿ ಬಣ್ಣದ ಜಗತ್ತಿಗೆ ಪ್ರವೇಶ ಮಾಡಿದರು ಮನೆದೇವ್ರು ಧಾರಾವಾಹಿಯಲ್ಲಿ ನಾಯಕನ ತಂಗಿ ಸಾನ್ವಿ ಪಾತ್ರದಲ್ಲಿ ನಟಿಸಿದರು ಮುಂದೆ ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡ ಇವರು ಎಡಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿ ಪ್ರಮುಖ ಪಾತ್ರಧಾರಿ ನಂದಿನಿಯಾಗಿ ಅಭಿನಯಿಸಿದರು. ಫಾರ್ಚುನರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಸ್ವಾತಿ, ಶಿವರಾಜ್ ಕುಮಾರ್ ನಟನೆಯ ದ್ರೋಣ ಚಿತ್ರದಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಒಂದು ಗಂಟೆಯ ಕಥೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾದ ಸುಂದರಕಾಂಡ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ್ದಾರೆ.
ಮುಂದೆ ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು ಶಿವರಾಜ್ ಕುಮಾರ್ ನಟನೆಯ ದ್ರೋಣ ಚಿತ್ರದಲ್ಲಿಯೂ ನಟಿಸಿದ್ದಾರೆ ಇದೀಗ ಸುಂದರಕಾಂಡ ಧಾರಾವಾಹಿಯಲ್ಲಿ ನಟಿಸಿ ಪರಭಾಷೆಯಲ್ಲೂ ಮೋಡಿ ಮಾಡಿದ್ದಾರೆ ಇನ್ನು ಜೆಮಿನಿ ಟಿವಿಯಲ್ಲಿ ಪ್ರಸಾರವಾದ ಶುಭಲಗ್ನಂ ಧಾರಾವಾಹಿಯಲ್ಲಿಯು ನಟಿಸಿರುವ ಸ್ವಾತಿ ಶರ್ಮ ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇಂತಿಪ್ಪ ಕೋಲಾರದ ಕುವರಿ ಮತ್ತೆ ಕಿರುತೆರೆಗೆ ಬರುತ್ತಾರಾ ಎಂದು ಕಾದು ನೋಡಬೇಕಾಗಿದೆ.