ಒಂದೇ ಕುಟುಂಬಕ್ಕೆ ಸೇರಿದ ನಟರು ಒಂದು ಸಿನಿಮಾದಲ್ಲಿ ಅಥವಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಅಭಿಮಾನಿಗಳಿಗೆ ನಿಜಕ್ಕೂ ಹಬ್ಬ. ಇದೀಗ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಕುಟುಂಬ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ. ಹೌದಾ, ಯಾವ ಸಿನಿಮಾ ಎಂದು ಕೇಳಬೇಡಿ.
ಭಾರೀ ವೈರಲ್ ಆಯ್ತು ಟಾಲಿವುಡ್ ಪ್ರಿನ್ಸ್ ಕುಟುಂಬ ಒಟ್ಟಿಗೆ ನಟಿಸಿರುವ ವಿಡಿಯೋ..! - ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿರುವ ಮಹೇಶ್ ಬಾಬು ಕುಟುಂಬ
ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಜಾಹೀರಾತಿಗಾಗಿ ಮಹೇಶ್ ಬಾಬು ಕುಟುಂಬ ಒಟ್ಟಿಗೆ ಆ್ಯಕ್ಟ್ ಮಾಡಿದೆ. ಇವರೆಲ್ಲರೂ ಸೇರಿ ಒಂದು ಸಿನಿಮಾದಲ್ಲಿ ನಟಿಸಿದರೆ ಇನ್ನೂ ಚೆಂದ ಎಂದು ಅಭಿಮಾನಿಗಳು ಆಸೆ ವ್ಯಕ್ತಪಡಿಸಿದ್ದಾರೆ.
ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್, ಪುತ್ರ ಗೌತಮ್ ಹಾಗೂ ಪುತ್ರಿ ಸಿತಾರಾ ಎಲ್ಲರೂ ಒಂದು ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದುವರೆಗೂ ಮಹೇಶ್ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕುಟುಂಬದೊಂದಿಗೆ ಒಟ್ಟಿಗೆ ನಟಿಸಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಜಾಹೀರಾತಿಗಾಗಿ ಮಹೇಶ್ ಬಾಬು ಕುಟುಂಬ ಒಟ್ಟಿಗೆ ಆ್ಯಕ್ಟ್ ಮಾಡಿದೆ. ಈಗಾಗಲೇ ಈ ಜಾಹೀರಾತು ಟಿವಿಯಲ್ಲಿ ಪ್ರಸಾರವಾಗುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಕೂಡಾ ವೈರಲ್ ಆಗಿದೆ. ಇವರೆಲ್ಲರೂ ಸೇರಿ ಒಂದು ಸಿನಿಮಾದಲ್ಲಿ ನಟಿಸಿದರೆ ಇನ್ನೂ ಚೆಂದ ಎಂದು ಅಭಿಮಾನಿಗಳು ಆಸೆ ವ್ಯಕ್ತಪಡಿಸಿದ್ದಾರೆ.