ಜೀ ಕನ್ನಡ ವಾಹಿನಿಯಲ್ಲಿ ರಾಮ್ ಜೀ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2' ಯಶಸ್ವಿ ಒಂದು ವರ್ಷ ಪೂರೈಸಿದೆ. ವಿಭಿನ್ನ ಕಥಾ ಹಂದರದ 'ನಾಗಿಣಿ-2' ಧಾರಾವಾಹಿ ಸ್ಪೆಷಲ್ ಎಫೆಕ್ಟ್ ಮೂಲಕ ಕೂಡಾ ಕಿರುತೆರೆ ಪ್ರಿಯರನ್ನು ಸೆಳೆದಿದೆ. ಹಿಂದಿಯ 'ನಾಗಿನ್' ಧಾರಾವಾಹಿಯ ಕನ್ನಡ ಅವತರಣಿಕೆ ಇದಾಗಿದ್ದು ಕಿರುತೆರೆ ವೀಕ್ಷಕರು ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ.
ನಾಗಿಣಿ ಧಾರಾವಾಹಿಯ ಮುಂದುವರಿದ ಭಾಗ 'ನಾಗಿಣಿ 2' ಆಗಿದ್ದು ನಾಗಿಣಿ ಭಾಗ 1 ರಲ್ಲಿ ನಾಗಲೋಕದ ರಾಣಿ ಅಮೃತ ಆಗಿ ದೀಪಿಕಾ ದಾಸ್ ಹಾಗೂ ನಾಯಕ ಅರ್ಜುನ್ ಆಗಿ ದೀಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದರು. ಇದೀಗ 'ನಾಗಿಣಿ 2' ರಲ್ಲಿ ಇಚ್ಛಾಧಾರಿ ನಾಗಿಣಿ ಶಿವಾನಿ ಆಗಿ ನಮ್ರತಾ ಗೌಡ ನಟಿಸುತ್ತಿದ್ದಾರೆ. ಇನ್ನು ನಾಗರಾಜ ಆದಿಶೇಷನಾಗಿ ಜಯರಾಂ ಕಾರ್ತಿಕ್ ಕಾಣಿಸಿಕೊಂಡಿದ್ದರು. 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ನಂತರ ಬೆಳ್ಳಿತೆರೆಯಲ್ಲಿ ಬ್ಯುಸಿಯಾದ ಕಾರ್ತಿಕ್ ಜಯರಾಂ 'ನಾಗಿಣಿ' ಧಾರಾವಾಹಿಯಲ್ಲಿ ಆದಿಶೇಷನಾಗಿ ನಟಿಸುವ ಮೂಲಕ ಅತಿಥಿಯಾಗಿ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದರು.