ಕರ್ನಾಟಕ

karnataka

ETV Bharat / sitara

ಬಿಗ್​​ಬಾಸ್ ಮನೆಯಿಂದ ಕಿಚನ್​​​​​ಗೆ ದರ್ಬಾರ್ ಮಾಡಲು ಬಂದ ಸುಜಾತಾ - ಅಡುಗೆ ಕಾರ್ಯಕ್ರಮಕ್ಕೆ ಸುಜಾತಾ ವಾಪಸ್​​​​

ಬಿಗ್​​ಬಾಸ್​​​​ಗೆ ಹೋಗುವ ಮುನ್ನ ಸುಜಾತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದ್ದ 'ಕಿಚನ್ ದರ್ಬಾರ್' ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಇದೀಗ ಮತ್ತೆ ಅದೇ ಕಾರ್ಯಕ್ರಮಕ್ಕೆ ಸುಜಾತಾ ವಾಪಸಾಗಿದ್ದಾರೆ.

Sujata akshaya
ಸುಜಾತಾ ಅಕ್ಷಯ

By

Published : Dec 3, 2019, 11:41 PM IST

'ರಾಧಾ ರಮಣ' ಧಾರಾವಾಹಿಯ ಬ್ಯೂಟಿಫುಲ್ ವಿಲನ್ ಸಿತಾರಾ ದೇವಿ ಎಂದೇ ಜನಪ್ರಿಯವಾಗಿದ್ದ ಸುಜಾತಾ ಅಕ್ಷಯಾ ಬಿಗ್ ಬಾಸ್​​​ನಿಂದ ಹೊರಬಂದಿದ್ದಾರೆ. ಬಿಗ್​ಬಾಸ್ ಮನೆಗೆ ಹೋದ ಹೊಸತರಲ್ಲಿ ಸುಜಾತ ತಮಗೆ ನೀಡಿದ್ದ ಟಾಸ್ಕ್​​​​ಗಳನ್ನು ಚೆನ್ನಾಗಿ ಮಾಡುತ್ತಿದ್ದರು. ಆದರೆ ಟಾಸ್ಕ್​ ಒಂದರಲ್ಲಿ ಕಾಲಿಗೆ ಪೆಟ್ಟುಮಾಡಿಕೊಂಡಿದ್ದ ಸುಜಾತಾ ನಂತರ ಯಾವ ಟಾಸ್ಕ್​​​​​ಗಳನ್ನು ಮಾಡಲಾಗದೆ ಎಲಿಮಿನೇಟ್ ಆಗಿದ್ದರು.

ಕಿಚನ್ ದರ್ಬಾರ್

ಇನ್ನು ಅಡುಗೆ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಸುಜಾತಾ ದೊಡ್ಮನೆಯಲ್ಲಿ ಕೂಡಾ ಅಡುಗೆ ಕೋಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಇದೀಗ ಬಿಗ್​​​​​ಬಾಸ್​​​ನಿಂದ ಎಲಿಮಿನೇಟ್ ಆದ ನಂತರವೂ ಸುಜಾತಾ ಮತ್ತೆ ಕಿಚನ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್​​​ಬಾಸ್ ಮನೆಯಿಂದ ಹೊರಬಂದ 2-3 ದಿನಗಳ ನಂತರ, ಕಿಚನ್ ದರ್ಬಾರ್ ಎಂಬ ಅಡುಗೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಗ್​​ಬಾಸ್​​​​ಗೆ ಹೋಗುವ ಮುನ್ನ ಸುಜಾತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದ್ದ ಕಿಚನ್ ದರ್ಬಾರ್ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಆದರೆ ಬಿಗ್​​​​ಬಾಸ್​​​ನಲ್ಲಿ ಅವಕಾಶ ಸಿಕ್ಕಾಗ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ಅದೇ ಕಾರ್ಯಕ್ರಮಕ್ಕೆ ಸುಜಾತಾ ವಾಪಸಾಗಿದ್ದಾರೆ.

ಬಿಗ್​​ಬಾಸ್​​​ನಿಂದ ಹೊರಬಂದ ನಂತರ ಸುಜಾತಾ ಅವರಿಗೆ ಅಡುಗೆ ಕಾರ್ಯಕ್ರಮದ ಜೊತೆಗೆ ಹೊಸ ಧಾರಾವಾಹಿಗಳಲ್ಲಿ ಅಭಿನಯಿಸುವಂತೆ ಸಾಲು ಸಾಲು ಆಫರ್​​​​​ಗಳು ಬರುತ್ತಿವೆಯಂತೆ. ಆದರೆ ಕುಟುಂಬದವರೊಂದಿಗೆ ಕೆಲವು ದಿನಗಳು ಕಾಲ ಕಳೆಯುವ ಸಲುವಾಗಿ ಯಾವ ಕಾರ್ಯಕ್ರಮವನ್ನೂ ಅವರು ಒಪ್ಪಿಕೊಂಡಿಲ್ಲವಂತೆ.

ABOUT THE AUTHOR

...view details