ಸುಜಾತ ಅಕ್ಷಯ ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿ ಹೊರ ಬಂದವರು. ಕೆಲವು ದಿನಗಳ ಕಾಲ ಮನೆಯಲ್ಲಿ ರೆಸ್ಟ್ ಮಾಡಬೇಕೆಂದು ಯಾವ ಸಿನಿಮಾ ಕೂಡಾ ಒಪ್ಪಿಕೊಂಡಿರಲಿಲ್ಲ. ನಂತರ ಅಡುಗೆ ಕಾರ್ಯಕ್ರಮವೊಂದರ ನಿರೂಪಣೆ ಮಾಡಲು ಒಪ್ಪಿದರು.
ಬ್ರೇಕ್ ನಂತರ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಸುಜಾತ ಅಕ್ಷಯ.. - ಮೈಸೂರು ಮಂಜು ಧಾರಾವಾಹಿಯಲ್ಲಿ ಸುಜಾತ ಅಕ್ಷಯ
ಬಿಗ್ಬಾಸ್ ಮನೆಯಿಂದ ಸುಜಾತ ಹೊರಬಂದ ಕೂಡಲೇ ನಟಿಸುವಂತೆ ಸಾಕಷ್ಟು ಕಡೆಗಳಿಂದ ಆಫರ್ ಬಂದಿತ್ತು. ಆದರೆ, ಕೊಂಚ ಬಿಡುವು ಬೇಕು ಎಂಬ ಉದ್ದೇಶದಿಂದ ಒಪ್ಪಿಕೊಳ್ಳಲಿಲ್ಲ. ಇದೀಗ ಅವರು ಧಾರಾವಾಹಿಯೊಂದರಲ್ಲಿ ನಟಿಸಲು ಒಪ್ಪಿದ್ದಾರೆ.
![ಬ್ರೇಕ್ ನಂತರ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಸುಜಾತ ಅಕ್ಷಯ.. Sujata akshaya](https://etvbharatimages.akamaized.net/etvbharat/prod-images/768-512-5361506-thumbnail-3x2-sujata.jpg)
ಸುಜಾತ ಅಕ್ಷಯ ಇದೀಗ ಮೈಸೂರು ಮಂಜು ನಿರ್ದೇಶನದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಧಾರಾವಾಹಿ ತಂಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸುಜಾತಾ ಅವರು ಕಾಣಿಸಿದ್ದು, ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಗ್ಬಾಸ್ ಮನೆಯಿಂದ ಸುಜಾತ ಹೊರಬಂದ ಕೂಡಲೇ ಸಾಕಷ್ಟು ಕಡೆಗಳಿಂದ ನಟಿಸಲು ಆಫರ್ ಬಂದಿತ್ತು. ಆದರೆ, ಕೊಂಚ ಬಿಡುವು ಬೇಕು ಎಂಬ ಉದ್ದೇಶದಿಂದ ಒಪ್ಪಿಕೊಳ್ಳಲಿಲ್ಲ. ಇಷ್ಟು ದಿನ ಸಿತಾರಾದೇವಿ ಎಂಬ ಬ್ಯೂಟಿಫುಲ್ ವಿಲನ್ ಆಗಿ ಕಿರುತೆರೆ ಪ್ರಿಯರ ಮನ ಗೆದ್ದಿರುವ ಸುಜಾತ ಅವರನ್ನು ಮತ್ತೆ ಕಿರುತೆರೆ ಮೇಲೆ ನೋಡಲು ಧಾರಾವಾಹಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.