ಬಿಗ್ ಮನೆಯ ಸ್ಪರ್ಧಿಗಳಿಗೆ ಮನೆಯಲ್ಲಿ ಈಡೇರದ ಆಸೆಗಳನ್ನು ಒಂದೊಂದಾಗಿ ಬಿಗ್ಬಾಸ್ ಈಡೇರಿಸುತ್ತಿದ್ದಾರೆ. ದಿವ್ಯಾ ಉರುಡುಗ ಕೇಳಿಕೊಂಡಿದ್ದ ಆಸೆಯನ್ನು ಬಿಗ್ಬಾಸ್ ನೆರವೇರಿಸಿದ್ದು, ಮನೆಯ ಸದಸ್ಯರು ಫುಲ್ ಖುಷಿಯಾಗಿದ್ದಾರೆ.
ಕಿವಿ ಆಕಾರದ ಆಕೃತಿಯಲ್ಲಿ ಬಿಗ್ಬಾಸ್ ಬಳಿ ಸುದೀಪ್ ಅವರು ಮಾಡಿದ ಅಡುಗೆಯನ್ನು ಮನೆಯ ಸದಸ್ಯರೆಲ್ಲರೂ ಸವಿಯಬೇಕು ಎಂದು ಕೇಳಿಕೊಂಡಿದ್ದರು ದಿವ್ಯಾ. ದಿವ್ಯಾ ಕೋರಿಕೆಯನ್ನು ಶೀಘ್ರವೇ ಈಡೇರಿಸಿರುವ ಸುದೀಪ್, ವಿಶೇಷ ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅದರ ಜೊತೆಗೆ ದಿವ್ಯಾ ಉರುಡುಗಗೆ ಒಂದು ಕಿವಿಮಾತು ಕೂಡ ಹೇಳಿದ್ದಾರೆ.