ಕಿಚ್ಚ ಸುದೀಪ್ ಇದುವರೆಗೂ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇದುವರೆಗೂ ಅವರು ವಾಲಿ, ವೀರ ಮದಕರಿ ಸಿನಿಮಾಗಳಲ್ಲಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಬಹಳ ವರ್ಷಗಳ ನಂತರ ಸುದೀಪ್ ಮತ್ತೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬಹಳ ವರ್ಷಗಳ ನಂತರ ದ್ವಿಪಾತ್ರದಲ್ಲಿ ಸುದೀಪ್...ಹೊಸ ಚಿತ್ರ ಒಪ್ಪಿಕೊಂಡ್ರಾ ಕಿಚ್ಚ...? - Big boss season 8
ಬಿಗ್ಬಾಸ್ ಸೀಸನ್ 8 ಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈಗಾಗಲೇ ವಾಹಿನಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ. ಮತ್ತೊಂದು ಪ್ರೋಮೋ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು ಇದರಲ್ಲಿ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಮದುವೆಯಾದ ನಂತರ ಸಿಗರೇಟ್ ಸೇದುವಷ್ಟು ಬದಲಾಗಿಬಿಟ್ರಾ ಕಾಜಲ್ ಅಗರ್ವಾಲ್...?
ಸುದೀಪ್ ಯಾವುದಾದರೂ ಹೊಸ ಚಿತ್ರ ಒಪ್ಪಿಕೊಂಡ್ರಾ..? ಅದರಲ್ಲಿ ಅಪ್ಪ-ಮಗ ಅಥವಾ ಅಣ್ಣ-ತಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರಾ..? ಎಂಬ ಪ್ರಶ್ನೆ ಬರಬಹುದು. ಹಾಗೇನಿಲ್ಲ. ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದಲಲ್ಲ, ಬಿಗ್ ಬಾಸ್ ಸೀಸನ್ 8 ರ ಹೊಸ ಪ್ರೋಮೋದಲ್ಲಿ. ಇತ್ತೀಚೆಗಷ್ಟೇ ಜ್ಯೋತಿಷಿಯ ಗೆಟಪ್‍ನಲ್ಲಿ ಸುದೀಪ್ ಕಾಣಿಸಿಕೊಂಡಿರುವ ಫೋಟೋವೊಂದನ್ನು ಕಲರ್ಸ್ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿತ್ತು. "ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು?" ಎಂದು ವಾಹಿನಿ ಕ್ಯಾಪ್ಷನ್ ನೀಡಿತ್ತು. ಈ ಫೋಟೋ ವಿಚಾರವಾಗಿ ವೀಕ್ಷಕರು ಹಾಗೂ ಸುದೀಪ್ ಅಭಿಮಾನಿಗಳು ಬಹಳ ಕುತೂಹಲ ವ್ಯಕ್ತಪಡಿಸಿದ್ದರು. ಕೊನೆಗೂ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಪ್ರೋಮೋದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರೋಮೋ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು ಕಿರುತೆರೆ ಪ್ರಿಯರು ಪ್ರೋಮೋ ನೋಡಲು ಹಾಗೂ ಬಿಗ್ ಬಾಸ್ -8 ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದಾರೆ ಎನ್ನಲಾಗಿದೆ.