ಬಿಗ್ ಬಾಸ್ ಮನೆಯಲ್ಲಿ ಪ್ರಿಯಾಂಕಾ ತಿಮ್ಮೇಶ್ಗೆ ಮಧ್ಯದ ಬೆರಳು ತೋರಿಸಿ ಪ್ರೇಕ್ಷಕರ ಕಂಗೆಣ್ಣಿಗೆ ಗುರಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್ಗೆ ಸುದೀಪ್ ಎಕ್ಸ್ಟ್ರಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತೇನೆ ಎಂದು ಹೇಳುವ ನೀವು, ಟೀಚರ್ ಹೇಳಿಕೊಡದ ಮಧ್ಯದ ಬೆರಳು ತೋರಿಸಿದ್ದರ ಅರ್ಥ ನನಗೆ ಗೊತ್ತಾಗಬೇಕು ಎಂದು ಸುದೀಪ್ ಒತ್ತಾಯಿಸಿದರು. ಆದರೆ, ಚಕ್ರವರ್ತಿ ಅದು ಪಂಚಭೂತಗಳ ಸನ್ನೆ, ಎಲ್ಲವನ್ನೂ ಸಮತೋಲನ ಮಾಡುತ್ತೇನೆ ಎಂಬುದು ಅರ್ಥ ಎಂದು ಸಮರ್ಥಿಸಿಕೊಂಡರು.
ನಂತರ ಸುದೀಪ್ ಮಾತನಾಡಿ, ಪ್ರತಿ ತಾಯಂದಿರು ಬಂದು ಅದರ ಅರ್ಥ ಕೇಳಿದರೆ ಉತ್ತರ ಏನು ಕೊಡಬೇಕು ಎಂದು ಪ್ರಶ್ನಿಸಿದರು. ಅಲ್ಲದೇ, ನಿಮ್ಮ ಪಕ್ಕದ ಮನೆಯ ಹೆಣ್ಣು ಮಗಳಿಗೆ ಈ ರೀತಿ ಮಾಡಿದರೆ ಏನು ಮಾಡುತ್ತೀರಿ ಎಂದು ಮರುಪ್ರಶ್ನಿಸಿದರು? ಆಗ ಚಕ್ರವರ್ತಿ ಕಪಾಳಕ್ಕೆ ಹೊಡೆಯಬೇಕು ಎಂದರು.