ಬಿಗ್ ಬಾಸ್ ಕನ್ನಡದ ಈ ವಾರದ ವೀಕೆಂಡ್ ಸಂಚಿಕೆಗೂ ಕಿಚ್ಚ ಸುದೀಪ್ ಬರುವುದಿಲ್ಲ. ಈ ವಾರವೂ ಬಿಗ್ ಬಾಸ್ ವೇದಿಕೆಗೆ ಕಿಚ್ಚ ಸುದೀಪ್ ಬರುತ್ತಿಲ್ಲ.
ಅನಾರೋಗ್ಯದ ಕಾರಣದಿಂದಾಗಿ ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ಈ ವಾರಾಂತ್ಯವೂ ಬಿಗ್ ಬಾಸ್ ಸಂಚಿಕೆ ಚಿತ್ರೀಕರಣಕ್ಕೆ ಸುದೀಪ್ ಬರುತ್ತಿಲ್ಲ. ಈ ಬಗ್ಗೆ ನಟ ಸುದೀಪ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ಈ ವಾರಾಂತ್ಯದ ಬಿಗ್ ಬಾಸ್ ಸಂಚಿಕೆ ಚಿತ್ರೀಕರಣಕ್ಕೆ ನಾನು ಮಿಸ್ ಆಗುತ್ತಿದ್ದೇನೆ. ನನಗೆ ಇನ್ನೂ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಶೂಟಿಂಗ್ ಕ್ಯಾನ್ಸಲ್ ಮಾಡಿ, ನನ್ನ ನಿರ್ಧಾರವನ್ನು ಸುಲಭ ಮಾಡಿದ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನನಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.
ಓದಿ:ಬಿಗ್ ಬಾಸ್ ಮನೆಯ ಒಂದು ಮೊಟ್ಟೆಯ ಕಥೆ: ನಿನ್ನ ಚರಿತ್ರೆ ಬಿಚ್ಚಿಡ್ತೀನಿ ಎಂದು ಪ್ರಶಾಂತ್ ಹೇಳಿದ್ದು ಯಾರಿಗೆ?
ಅನಾರೋಗ್ಯದ ಕಾರಣದಿಂದಾಗಿ ಕಳೆದ ವಾರಾಂತ್ಯದ ಸಂಚಿಕೆಗಳ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಗೈರಾಗಿದ್ದರು. ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಿ, ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಮಾಡಲಾಗಿತ್ತು. ಈ ವಾರ ದೊಡ್ಡ ಮನೆಯಿಂದ ಯಾರು? ಹೇಗೆ? ಹೊರ ನಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.