ಕರ್ನಾಟಕ

karnataka

ETV Bharat / sitara

ಹ್ಯಾಟ್ರಿಕ್ ಹೀರೋ ಸಿನಿಮಾ ಬಗ್ಗೆ ತೆಲುಗು ಸ್ಟೈಲಿಶ್ ಸ್ಟಾರ್ ಹೇಳಿದ್ದೇನು? - bhajarangi 2

ತೆಲುಗಿನ 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಅಲ್ಲು ಅರ್ಜುನ್
ಅಲ್ಲು ಅರ್ಜುನ್

By

Published : Oct 28, 2021, 2:06 PM IST

Updated : Oct 28, 2021, 2:14 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ 'ಭಜರಂಗಿ 2' ಚಿತ್ರ ಬಿಡುಗಡೆಗೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ರಾಜ್ಯ ಮಾತ್ರಲ್ಲದೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಿದೆ.

ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ತೆಲುಗಿನ ನಾಗಶೌರ್ಯ, ರಿತು ವರ್ಮಾ ನಟನೆಯ 'ವರುಡು ಕಾವಲೆನು' ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಅಲ್ಲು ಅರ್ಜುನ್, ಶಿವರಾಜ್ ಕುಮಾರ್ 'ಭಜರಂಗಿ 2' ಸಿನಿಮಾಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಕರ್ನಾಟಕದಲ್ಲಿ ಕೂಡ ಥಿಯೇಟರ್‌ನಲ್ಲಿ 100% ಆಸನ ವ್ಯವಸ್ಥೆ ಅನುಮತಿ ನೀಡಲಾಗಿದೆ. ಭಜರಂಗಿ 2 ಸಿನಿಮಾ ರಿಲೀಸ್ ಆಗುತ್ತಿದೆ. ಇಡೀ ಕರ್ನಾಟಕ, ಕನ್ನಡ ಚಿತ್ರರಂಗಕ್ಕೆ ಶುಭಾಶಯ ಹೇಳುವೆ. ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗಲಿ, ಕೊರೊನಾ ನಂತರ ನಿಧಾನವಾಗಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತಿವೆ ಅಂತಾ ಅಲ್ಲು ಅರ್ಜುನ್ ಹೇಳಿದರು.

'ಭಜರಂಗಿ 2' ಸಿನಿಮಾದಲ್ಲಿ ಶಿವರಾಜ್ ಕುಮಾರ್ ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಭಾವನ ಮೆನನ್, ಶೃತಿ, ಭಜರಂಗಿ ಲೋಕಿ, ಸೇರಿದಂತೆ ಸಾಕಷ್ಟು ತಾರಗಣವಿದೆ. ಎ ಹರ್ಷ ನಿರ್ದೇಶನ ಮಾಡಿರೋ ಈ ಸಿನಿಮಾ ಕರ್ನಾಟಕದಲ್ಲಿ 400 ಚಿತ್ರಮಂದಿರ ಹಾಗು ಬೇರೆ ರಾಜ್ಯಗಳು ಸೇರಿದಂತೆ ಒಟ್ಟು 1,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

Last Updated : Oct 28, 2021, 2:14 PM IST

ABOUT THE AUTHOR

...view details