ಮಾನ್ಸಿ ಜೋಷಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದು, ತಂಗಿ ಇಂಚರಾ ಜೋಷಿ ಕೂಡ ಅಕ್ಕನ ಹಾದಿಯನ್ನೇ ಹಿಡಿದು ಹೆಸರು ಮಾಡುತ್ತಿದ್ದಾರೆ.
ಕಿರುತೆರೆಯಲ್ಲಿ ಮಿಂಚುತ್ತಿರುವ ಮತ್ತೊಂದು ಅಕ್ಕ - ತಂಗಿಯರ ಜೋಡಿ - - Inchara Joshi
ರಚಿತಾ ರಾಮ್ ಹಿರಿತೆರೆಯಲ್ಲಿ ಹೆಸರು ಗಳಿಸಿದ್ದರೆ, ನಿತ್ಯಾ ರಾಮ್ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಸೋನುಗೌಡ ಅವರು ಬೆಳ್ಳಿತೆರೆಯಲ್ಲಿ ಜನಪ್ರಿಯರಾಗಿದ್ರೆ, ತಂಗಿ ನೇಹಾಗೌಡ ಅವರು ಕಿರುತೆರೆ ಲೋಕದ ಪ್ರೀತಿಯ ಗೊಂಬೆ. ಅಂತೆಯೇ ಮಾನ್ಸಿ ಜೋಷಿ ಹಾಗೂ ಇಂಚರಾ ಜೋಷಿ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.
ಮಾನ್ಸಿ ಜೋಷಿ ಬಿಳಿ ಹೆಂಡ್ತಿ ಧಾರಾವಾಹಿಯಲ್ಲಿ ರಮ್ಯಾಳಾಗಿ ನಟನಾ ಪಯಣ ಶುರು ಮಾಡಿ, ಮುಂದೆ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನ ತಂಗಿ ಅನ್ವಿತಾಳಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಮುಂದೆ ಪಾರು ಧಾರಾವಾಹಿಯಲ್ಲಿ ಅನುಷ್ಕಾ ಎಂಬ ವಿಲನ್ ಪಾತ್ರದಲ್ಲಿ ನಟಿಸಿ ಕಿರುತೆರೆ ಪ್ರಿಯರನ್ನು ಸೆಳೆದಿರುವ ಈಕೆ, ನಾಯಕಿ ಧಾರಾವಾಹಿಯಲ್ಲಿ ಸೌಜನ್ಯ ಆಲಿಯಾಸ್ ಪಿಂಕಿಯ ಪಾತ್ರಕ್ಕೂ ಜೀವ ತುಂಬಿದ್ದಾರೆ. ಅಲ್ಲದೆ, ಪರಭಾಷೆಯನ್ನು ತಮ್ಮ ನಟನಾ ಕೌಶಲ್ಯ ಪ್ರದರ್ಶಿಸುತ್ತಿದ್ದಾರೆ.
ಇಂಚರಾ ಜೋಷಿ ರಂಗನಾಯಕಿ ಧಾರಾವಾಹಿಯ ಛಾಯಾಳಾಗಿ ನಟನಾ ಪಯಣ ಆರಂಭಿಸಿದ್ದು, ಮೊದಲ ಧಾರಾವಾಹಿಯಲ್ಲೇ ಕಿರುತೆರೆ ಪ್ರಿಯರ ಮನ ಸೆಳೆದವರು. ಕಳೆದ ವರ್ಷ ನಡೆದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮನೆ ಮೆಚ್ಚಿದ ಸಹೋದರಿ ಪ್ರಶಸ್ತಿಯನ್ನು ಪಡೆದಿರುವುದೇ ಅವರ ಯಶಸ್ಸಿಗೆ ಸಾಕ್ಷಿ. ಮುಂದೆ ಮರಳಿ ಬಂದಳು ಸೀತೆ ಧಾರಾವಾಹಿಯಲ್ಲಿ ನಾಯಕನ ತಂಗಿ ಭೂಮಿಯಾಗಿ ನಟಿಸಿರುವ ಇಂಚರಾ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭೂಮಿ ತಾಯಾಣೆ ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.