'ಮಗಳು ಜಾನಕಿ' ಧಾರಾವಾಹಿ ವೀಕ್ಷಕರಿಗೆ ಪ್ರತಿಯೊಂದು ಪಾತ್ರಗಳು ನೆನಪಿರುತ್ತದೆ. ಶ್ಯಾಮಲತ್ತೆ ಹಾಗೂ ಸುಂದರಮೂರ್ತಿ ಅವರ ಪುತ್ರ ಶ್ಯಾಮಸುಂದರ 'ಮಗಳು ಜಾನಕಿ' ಧಾರಾವಾಹಿಯ ಹೊಸ ಪರಿಚಯ. ಈ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟನ ನಿಜ ಹೆಸರು ಶ್ರೀರಾಮ್.
'ಮಗಳು ಜಾನಕಿ' ಶ್ಯಾಮಸುಂದರನ ಬಗ್ಗೆ ನಿಮಗೆಷ್ಟು ಗೊತ್ತು...?
'ನಿರ್ದೇಶಕ ಟಿ.ಎನ್. ಸೀತಾರಾಂ ಬಗ್ಗೆ ಮಾತನಾಡಿರುವ ಶ್ರೀರಾಮ್, 'ಅವರೊಬ್ಬ ನುರಿತ ನಿರ್ದೇಶಕ, ಹೃದಯವೈಶಾಲ್ಯತೆ ಹೊಂದಿರುವ ಶ್ರೇಷ್ಠ ವ್ಯಕ್ತಿತ್ವ. ಅವರಿಂದ ಕಲಿಯೋದು ತುಂಬಾ ಇದೆ. ಅಂತಹ ಸೀತಾರಾಮ್ ಸರ್ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಬಹಳ ಖುಷಿ ಇದೆ' ಎನ್ನುತ್ತಾರೆ.
ಶ್ರೀರಾಮ್ ಹುಟ್ಟಿದ್ದು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ. ಓದಿದ್ದು ಇಂಜಿನಿಯರಿಂಗ್, ಆಯ್ದುಕೊಂಡಿದ್ದು ನಟನಾ ವೃತ್ತಿ. ಇವರು 'ರಾಧಾರಮಣ' ಧಾರಾವಾಹಿಯಲ್ಲಿ ಕೂಡಾ ಸುಮೇಧ್ ಎಂಬ ಪಾತ್ರ ಮಾಡಿದ್ದಾರೆ. 'ದಿ ಪ್ಲ್ಯಾನ್' ಎಂಬ ಕನ್ನಡ ಚಿತ್ರದಲ್ಲಿ ಅನಂತನಾಗ್ ಜೊತೆ, ದರ್ಪಣ ಎಂಬ ಚಿತ್ರದಲ್ಲಿ ವಿಲನ್ ಆಗಿ, ಪೆಟ್ಕಮ್ಮಿ ಎಂಬ ತುಳು ಚಿತ್ರದಲ್ಲಿ ನಾಯಕನಾಗಿ, ಗಿಮಿಕ್ ಚಿತ್ರದಲ್ಲಿ ಗಣೇಶ್ ಸ್ನೇಹಿತನಾಗಿ, ರಿಪ್ಪರ್ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಅನುಭವವಿದೆ. ಇದೀಗ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಟಿ.ಎನ್. ಸೀತಾರಾಮ್ ಅವರೊಂದಿಗೆ ಕೆಲಸ ಮಾಡುತ್ತಿರುವ ಬಗ್ಗೆ ಶ್ರೀರಾಮ್ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.
'ನಿರ್ದೇಶಕ ಟಿ.ಎನ್. ಸೀತಾರಾಂ ಬಗ್ಗೆ ಮಾತನಾಡಿರುವ ಶ್ರೀರಾಮ್, 'ಅವರೊಬ್ಬ ನುರಿತ ನಿರ್ದೇಶಕ, ಹೃದಯವೈಶಾಲ್ಯತೆ ಹೊಂದಿರುವ ಶ್ರೇಷ್ಠ ವ್ಯಕ್ತಿತ್ವ. ಅವರಿಂದ ಕಲಿಯೋದು ತುಂಬಾ ಇದೆ. ಅಂತಹ ಸೀತಾರಾಮ್ ಸರ್ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಬಹಳ ಖುಷಿ ಇದೆ' ಎನ್ನುತ್ತಾರೆ. 'ನನ್ನ ವೃತ್ತಿಯಲ್ಲಿ ಇದೊಂದು ಪ್ರಮುಖ ಸಕಾರಾತ್ಮಕ ತಿರುವು ಆಗಲಿದೆ. ನನ್ನ ಪಾತ್ರ ಟೀವಿಯಲ್ಲಿ ಬರುತ್ತಲೇ ಸಾಕಷ್ಟು ಜನ ಫೋನ್, ಮೆಸೇಜುಗಳನ್ನು ಮಾಡಿ ಸಂತೊಷಪಟ್ಟು ಅಭಿನಂದನೆ ಸಲ್ಲಿಸಿದರು. ಇದುವರೆಗೂ ಜನರು ನನ್ನನ್ನು ನೋಡಿದಾಗಲೆಲ್ಲಾ 'ರಾಧಾರಾಮಣ' ಸುಮೇಧ್ ಎನ್ನುತ್ತಿದ್ದವರು ಈಗ 'ಮಗಳುಜಾನಕಿ' ಶ್ಯಾಮ ಎಂದು ಕರೆಯುತ್ತಾರೆ. ಆಗ ನನ್ನ ಮೈ ರೋಮಾಂಚನವಾಗುತ್ತೆ ಎಂದರು. ಮುಂದೆ ಒಳ್ಳೊಳ್ಳೆ ಪಾತ್ರಗಳಲ್ಲಿ ಕೆಲಸ ಮಾಡಬೇಕು. ಒಬ್ಬ ಪರಿಪೂರ್ಣ ನಟನಾಗಬೇಕು ಎಂಬ ಅಭಿಲಾಷೆ ನನ್ನದು ಎನ್ನುತ್ತಾರೆ ಶ್ರೀರಾಮ್.