ಇಂದು ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಜನ್ಮದಿನ. ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯ ಅದೆಷ್ಟೋ ಜನರಿಗೆ ರೋಲ್ ಮಾಡೆಲ್ ಆಗಿರುವ ವರನಟನ ಜನ್ಮದಿನಕ್ಕೆ ಎಲ್ಲರೂ ಶುಭ ಕೋರಿದ್ದಾರೆ. ಕಿರುತೆರೆ ನಟ ಶ್ರೀ ಮಹಾದೇವ್ ಗಿಟಾರ್ ನುಡಿಸುವ ಮೂಲಕ ಅಣ್ಣಾವ್ರ ಬರ್ತಡೇಗೆ ಶುಭ ಕೋರಿದ್ದಾರೆ.
ಗಿಟಾರ್ ನುಡಿಸುವ ಮೂಲಕ ಅಣ್ಣಾವ್ರಿಗೆ ಹುಟ್ಟುಹಬ್ಬದ ಶುಭ ಕೋರಿದ ಶ್ರೀ ಮಹಾದೇವ್ - small screen actor wished Rajkumar by playing guitar
ವರನಟ ಡಾ. ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ನಟ ಶ್ರೀ ಮಹಾದೇವ್ ಗಿಟಾರ್ ನುಡಿಸುವ ಮೂಲಕ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಡಾ. ರಾಜ್ಕುಮಾರ್ ಅಭಿನಯದ ಕಸ್ತೂರಿ ನಿವಾಸ ಚಿತ್ರದ 'ಆಡಿಸಿ ನೋಡು ಬೀಳಿಸಿ ನೋಡು' ಹಾಡನ್ನು ಗಿಟಾರ್ ನುಡಿಸುವ ಮೂಲಕ ಶ್ರೀ ಮಹಾದೇವ್ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ತಾವು ಗಿಟಾರ್ ನುಡಿಸುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಶ್ರೀ, ನನಗೆ ಡಾ. ರಾಜ್ ಕುಮಾರ್ ಎಂದರೆ ಬಹಳ ಇಷ್ಟ. ಅವರು ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡಾ ಬಹಳ ಅದ್ಭುತ ವ್ಯಕ್ತಿ. ಅವರ ವ್ಯಕ್ತಿತ್ವ ನನ್ನ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದು ಬರೆದುಕೊಂಡಿದ್ದಾರೆ. ಶ್ರೀ ಮಹಾದೇವ್ ನಟನೆ ಜೊತೆಗೆ ಬಿಡುವಿನ ವೇಳೆ ಗಿಟಾರ್ ಕೂಡಾ ಕಲಿಯುತ್ತಿದ್ದಾರೆ. ಲಾಕ್ಡೌನ್ ದಿನಗಳನ್ನು ಅವರು ಎಂಜಾಯ್ ಮಾಡುತ್ತಿದ್ದಾರೆ. ನಮ್ಮೊಳಗಿನ ಪ್ರತಿಭೆಯನ್ನು ತೋರಿಸಲು ಇದು ಒಳ್ಳೆಯ ಅವಕಾಶ ಎಂದು ಶ್ರೀ ಮಹಾದೇವ್ ಹೇಳಿಕೊಂಡಿದ್ದಾರೆ. ಶ್ರೀ ಮನೆಯಲ್ಲಿ ಅಡುಗೆ ಕೂಡಾ ಮಾಡುತ್ತಿದ್ದಾರಂತೆ.