ಡಬ್ಬಿಂಗ್ಪ್ರಿಯರಿಗಾಗಿ ಕಿರುತೆರೆಯಲ್ಲಿ ಪ್ರತಿವಾರ ಒಂದೊಂದು ಡಬ್ಬಿಂಗ್ ಸಿನಿಮಾವನ್ನು ಪ್ರಸಾರ ಮಾಡಲಾಗುತ್ತಿದೆ. ಹಿಂದಿ, ತೆಲುಗು, ತಮಿಳು, ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿದ್ದು ಇದು ವೀಕ್ಷಕರ ಮೆಚ್ಚುಗೆ ಕೂಡಾ ಗಳಿಸಿದೆ. ಇದುವರೆಗೂ ಭಾರತೀಯ ಸಿನಿಮಾಗಳನ್ನು ಪ್ರಸಾರ ಮಾಡುತ್ತಿದ್ದ ಕಲರ್ಸ್ ಕನ್ನಡ ಈ ಬಾರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ಕಿರುತೆರೆಯಲ್ಲಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ ಸ್ಪೈಡರ್ ಮ್ಯಾನ್ - Spider man movie
ಫೆಬ್ರವರಿ 7 ಭಾನುವಾರದಂದು ಕಲರ್ಸ್ ಕನ್ನಡದಲ್ಲಿ 'ಸ್ಪೈಡರ್ ಮ್ಯಾನ್' ಸಿನಿಮಾ ಪ್ರಸಾರವಾಗಲಿದೆ. ಡಬ್ಬಿಂಗ್ ಪ್ರಿಯರಿಗಾಗಿ ಈ ಚಿತ್ರವನ್ನು ಕಲರ್ಸ್ ವಾಹಿನಿ ಕನ್ನಡದಲ್ಲಿ ಡಬ್ ಮಾಡಲಾಗಿದೆ. ಭಾನುವಾರ ಮಧ್ಯಾಹ್ನ 1 ಗಂಟೆಗೆ ಈ ಸಿನಿಮಾ ಪ್ರಸಾರವಾಗಲಿದೆ.
ಇದನ್ನೂ ಓದಿ:'ಸತ್ಯ'ಳಂತೆ ಫೋಟೋಶೂಟ್ ಮಾಡಿಸಿದ 'ಕಿನ್ನರಿ'
ಇತ್ತೀಚೆಗಷ್ಟೇ 'ಬಾಹುಬಲಿ' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ದ ಕಲರ್ಸ್ ಕನ್ನಡ ಈಗ ಜಗತ್ತಿನಾದ್ಯಂತ ವೀಕ್ಷಕರನ್ನು ರೋಮಾಂಚನಗೊಳ್ಳುವಂತೆ ಮಾಡಿದ್ದ 'ಸ್ಪೈಡರ್ ಮ್ಯಾನ್' ಚಿತ್ರವನ್ನು ಪ್ರಸಾರ ಮಾಡುತ್ತಿದೆ. ಇದೇ ಭಾನುವಾರ ಮಧ್ಯಾಹ್ನ 1 ಗಂಟೆಗೆ ಸ್ಪೈಡರ್ ಮ್ಯಾನ್ ಚಿತ್ರ ಪ್ರಸಾರವಾಗುತ್ತಿದೆ. ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್ ಅಮೆರಿಕನ್ ಸೂಪರ್ ಹೀರೋ ಫಿಲ್ಮ್ ಆಗಿದ್ದು ಮಾರ್ವೆಲ್ ಕಾಮಿಕ್ಸ್ನ ಪಾತ್ರವನ್ನು ಸ್ಪೈಡರ್ ಮ್ಯಾನ್ ಆಧರಿಸಿದೆ. 2017ರಲ್ಲಿ ರಿಲೀಸ್ ಆದ ಈ ಚಿತ್ರವನ್ನು ಜಾನ್ ವಾಟ್ಸ್ ನಿರ್ದೇಶಿಸಿದ್ದಾರೆ. ಟಾಮ್ ಹೋಲ್ಲಾಂಡ್ ,ಮೈಕಲ್ ಕೀಟನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾದ 'ಆ್ಯಂಗ್ರಿ ಬರ್ಡ್ಸ್ 2' ಸಿನಿಮಾ ಪ್ರಸಾರ ಆಗಿದ್ದು ಮಕ್ಕಳು ಮೆಚ್ಚಿಕೊಂಡಿದ್ದರು. ಇದೀಗ ಸ್ಪೈಡರ್ ಮ್ಯಾನ್ ಪ್ರಸಾರವಾಗಲಿದ್ದು ಭಾನುವಾರ ಈ ಸಿನಿಮಾ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.