ಕರ್ನಾಟಕ

karnataka

ETV Bharat / sitara

ತಾಯಿಯ ಹುಟ್ಟುಹಬ್ಬಕ್ಕೆ ವಿಭಿನ್ನ ಗಿಫ್ಟ್ ನೀಡಿದ್ರು ಶ್ವೇತಾ ಚಂಗಪ್ಪ - Maja Talkies

ಶ್ವೇತಾ ಚಂಗಪ್ಪ ತಮ್ಮ ತಾಯಿಯ ಹುಟ್ಟುಹಬ್ಬದ ದಿನ ತಾಯಿಯ ಹೆಸರಿನಲ್ಲಿ ತಾರಾ ಡಿಸೈನರ್ ವೇರ್ ಎಂಬ ಡಿಸೈನರ್ ಕ್ಲಾಥಿಂಗ್​ ಬ್ರಾಂಡ್ ಆರಂಭಿಸಿದ್ದಾರೆ.

ಶ್ವೇತಾ ಚಂಗಪ್ಪ
ಶ್ವೇತಾ ಚಂಗಪ್ಪ

By

Published : Aug 16, 2020, 9:40 AM IST

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್​ನ ರಾಣಿಯಾಗಿ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಕೊಡಗಿನ ಕುವರಿ ಶ್ವೇತಾ ಚಂಗಪ್ಪ ಮಗುವಾದ ಮೇಲೆ ಬ್ರೇಕ್ ಪಡೆದುಕೊಂಡಿದ್ದರು.

ಸುಮತಿ ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿರುವ ಶ್ವೇತಾ ಮುಂದೆ ಕಾದಂಬರಿ, ಸುಕನ್ಯಾ, ಅರುಂಧತಿಯಂತಹ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ಗೂ ಎಂಟ್ರಿ ಕೊಟ್ಟ ಇವರು ಮುಂದೆ ಮಜಾ ಟಾಕೀಸ್​ನಲ್ಲಿ ಮಿಂಚಿದ್ದರು.

ಶ್ವೇತಾ ಚಂಗಪ್ಪ

ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಶ್ವೇತಾ ಚಂಗಪ್ಪ ಕೆಲವು ದಿನಗಳಿಂದ ಇನ್ಸ್ಟಾಗ್ರಾಂನಲ್ಲಿ ತಮ್ಮ ಹೊಸ ಆಲೋಚನೆಯ ಕುರಿತು ಸುಳಿವು ನೀಡುತ್ತಲೇ ಬಂದಿದ್ದರು. ಇಂದು ಶ್ವೇತಾ ತಮ್ಮ ಹೊಸ ಕಾರ್ಯದ ಕುರಿತು ಮಾಹಿತಿ ಹೊರಹಾಕಿದ್ದಾರೆ. ತಮ್ಮ ತಾಯಿಯ ಹುಟ್ಟುಹಬ್ಬದ ದಿನ ತಮ್ಮ ಏಳಿಗೆಗಾಗಿ ದುಡಿದ ತಾಯಿಯ ಹೆಸರಿನಲ್ಲಿ ತಾರಾ ಡಿಸೈನರ್ ವೇರ್ ಎಂಬ ಡಿಸೈನರ್ ಕ್ಲಾಥಿಂಗ್​ ಬ್ರಾಂಡ್ ಅನ್ನು ಶ್ವೇತಾ ಆರಂಭಿಸಿದ್ದಾರೆ.

ಈ ಬಗ್ಗೆ ಶೇರ್ ಮಾಡಿರುವ ಶ್ವೇತಾ "ಈ ತಾರಾ ಡಿಸೈನರ್ ವೇರ್ ಶಕ್ತಿ, ಬಲ ಹಾಗೂ ವಿಶ್ವಾಸದ ಸಂಕೇತವಾಗಿರುವ ಎಲ್ಲಾ ಮಹಿಳೆಯರಿಗೆ ಅರ್ಪಿಸುತ್ತಿದ್ದೇನೆ. ಈ ಡಿಸೈನರ್ ಕ್ಲಾಥಿಂಗ್ ಬ್ರಾಂಡ್​ನ್ನು ತಾಯಿಯ ಜನುಮದಿನದಂದು ಬಿಡುಗಡೆ ಮಾಡುತ್ತಿರುವೆ. ನನ್ನ ಅಮ್ಮನೇ ನನ್ನ ನಕ್ಷತ್ರ. ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಅವಳೇ ಕಾರಣ. ಅದೇ ಕಾರಣದಿಂದ ಅವಳ ಹೆಸರನ್ನೇ ಇದಕ್ಕೆ ಇಟ್ಟಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಹೆಣ್ಣಿನ ಮಹತ್ವವನ್ನು ಸಾರುವುದರೊಂದಿಗೆ ಅಮ್ಮನ ನಿಸ್ವಾರ್ಥ ಮನೋಭಾವವನ್ನು ಹೊಗಳಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ ಶ್ವೇತಾ ಚಂಗಪ್ಪ.

ABOUT THE AUTHOR

...view details